ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆತಗಲ್ ರೈತ ಕುಟುಂಬದ ಸಾವು: ಮೂವರ ಬಂಧನ

Last Updated 6 ಜನವರಿ 2019, 20:31 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಮೆತಗಲ್ ಗ್ರಾಮದ ರೈತ ಶೇಖರಯ್ಯ ಬಿಡನಾಳ ಸೇರಿದಂತೆ ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಮೂವರನ್ನು ಬಂಧಿಸಲಾಗಿದೆ.

ಮೃತ ಶೇಖರಯ್ಯ ಅವರ ಸಹೋದರರಾದ ಚನ್ನಬಸಯ್ಯ ಬಿಡನಾಳ, ರುದ್ರಯ್ಯ ಬಿಡನಾಳ ಹಾಗೂ ಅಳಿಯ ಶರಣಯ್ಯ ಕವಟಗಿಮಠ ಬಂಧಿತರು.

‘ಶೇಖರಯ್ಯ ಅವರ ಎರಡನೇ ಮಗಳು ಗೌರಮ್ಮಳ ಪತಿ ಶರಣಯ್ಯ ಕವಟಗಿಮಠ ವಿನಾಕಾರಣ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ತವರು ಮನೆಯಲ್ಲಿ ಬಿಟ್ಟು ಹೋಗಿದ್ದ. ಸಹೋದರರಾದ ಚನ್ನಬಸಯ್ಯ ಬಿಡನಾಳ, ರುದ್ರಯ್ಯ ಬಿಡನಾಳ ಜಮೀನು ಹಂಚಿಕೆ ಮಾಡಿಕೊಡದೆತೊಂದರೆ ನೀಡಿದ್ದರು’ ಎಂದು ಮೃತ ಶೇಖರಯ್ಯ ಅವರ ಸೊಸೆ (ಹೆಂಡತಿಯ ತಂಗಿ) ಲಲಿತಾ ದೂರು ನೀಡಿದ್ದರು.

ಡೆತ್‌ನೋಟ್‌ ಪತ್ತೆ: 'ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದರೂ ಸಮಸ್ಯೆ ದೂರವಾಗಿಲ್ಲ. ಅವರ ಬಾಳು ಬೆಳಕಾಗಲಿಲ್ಲ. ಬ್ಯಾಂಕ್, ಸ್ವಸಹಾಯ ಸಂಘಗಳಲ್ಲಿ ₹ 6 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದೆ. ನಾಲ್ಕು ಎಕರೆ ಜಮೀನು ಸರ್ವೇಗಾಗಿ ಅರ್ಜಿ ಹಾಕಿದ್ದೆ. ಆದರೆ ಸರ್ವೇಮಾಡಲಿಲ್ಲ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಿದೆ ಎಂದು ಬರೆದಿರುವ ಡೆತ್‌ ನೋಟ್‌ ಪತ್ತೆಯಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT