ಭೂ ಮಂಜೂರಾತಿ ಆದೇಶ ನೀಡಲು ಆಗ್ರಹ

7
ದಲಿತ ವಿಮೋಚನಾ ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ

ಭೂ ಮಂಜೂರಾತಿ ಆದೇಶ ನೀಡಲು ಆಗ್ರಹ

Published:
Updated:
Deccan Herald

ಕೊಪ್ಪಳ: ದಲಿತರು ಸಾಗುವಳಿ ಮಾಡುತ್ತಿರುವ ಭೂ ಮಂಜೂರಾತಿಗೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ವಿಮೋಚನಾ ಸೇನೆಯ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿರುವ ಆಯಾ ತಾಲ್ಲೂಕು ವ್ಯಾಪ್ತಿಗೆ ಸೇರಿರುವ ಸಹಕಾರಿ ಪಡಾ, ಗೈರಾಣ, ಪರಂಪೂಕ, ಅರಣ್ಯ (ವ್ಯವಸಾಯ ಅನುಕೂಲವಾಗುವಂತೆ) ಭೂಮಿಯನ್ನು ಭೂರಹಿತ ದಲಿತ ಕುಟುಂಬದ ಫಲಾನುಭವಿಗಳು ಸುಮಾರು 25ರಿಂದ 30 ವರ್ಷಗಳ ವರೆಗೆ ಸಾಗುವಳಿ ಮಾಡುತ್ತಿರುವವರೆಗೆ ಭೂ ಮಂಜೂರಾತಿ ಆದೇಶ ನೀಡಬೇಕು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಒಳಪಡುವ ಗ್ರಾಮಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಬೇಕು. ಉದ್ಯೋಗ ಖಾತ್ರಿ ಕೆಲಸ ಆರಂಭಿಸಿ, ಗುಳೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೇಂದ್ರ ಸರ್ಕಾರದ ಸೂಚನೆಯಂತೆ ರೈತರ ಹೊಲ ಗದ್ದೆಗಳಲ್ಲಿ ಎನ್‌ಆರ್‌ಜಿ ಯೋಜನೆ ಅಡಿ ಕೃಷಿ ಹೊಂಡ, ಚೆಕ್‌ ಡ್ಯಾಂ ನಿರ್ಮಾಣ ಮುಂತಾದವುಗಳನ್ನು ಆಯಾ ತಾಲ್ಲೂಕು ಅಧಿಕಾರಿಗಳು ಈ ಯೋಜನೆಗಳನ್ನು ಜಾರಿಗೊಳಿಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಳಪಡುವ ಕ್ರಷರ್‌ ಮತ್ತು ಮರಳು ಅಕ್ರಮವಾಗಿ ನಡೆಯುತ್ತಿದ್ದು, ಕಾರಣ ಈ ದಂಧೆ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿರುವ 3 ಹೊಸ ತಾಲ್ಲೂಕುಗಳು ಕುಕನೂರು, ಕನಕಗಿರಿ, ಕಾರಟಗಿ ತಾಲ್ಲೂಕು ಕಚೇರಿ ಆರಂಭಿಸಿದ್ದು, ಅಲ್ಲಿ ಸರಿಯಾದ ಸಿ‌ಬ್ಬಂದಿ, ಇತರ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು. ಈ ವರ್ಷದಲ್ಲಿ ವರುಣನ ಅವಕೃಪೆಯಿಂದ ಬರಗಾಲ ಆವರಿಸಿದ್ದು, ರೈತರಿಗೆ ಪರಿಹಾರ ಧನ ವಿತರಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.

ಸೇನೆಯ ರಾಜ್ಯ ಉಪಾಧ್ಯಕ್ಷ ಎಸ್‌.ದುರಗಪ್ಪ, ಜಿಲ್ಲಾಧ್ಯಕ್ಷ ರಮೇಶ ಸೋಮನಾಳ, ಉಪಾಧ್ಯಕ್ಷರಾದ ಬೇನಾಳಪ್ಪ ಪೂಜಾರ, ವಿರುಪಾಕ್ಷ ದೊಡ್ಡಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ಬಡಿಗಿ, ಜಿಲ್ಲಾ ಸಹಕಾರ್ಯದರ್ಶಿ ಅಂಜಿನಪ್ಪ, ದುರುಗಪ್ಪ ಹೊಸಳ್ಳಿ, ಶಿವಶಂಕರ, ದುರಗಪ್ಪ ಜಾಲಿಮರ, ಎಂ.ಪರಮೇಶ, ಹುಲಗಪ್ಪ ಟೀಪುಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !