ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ: ಕರಿಸಿದ್ದೇಶ್ವರ ಶಿವಾಚಾರ್ಯರು

Published 29 ಆಗಸ್ಟ್ 2024, 4:54 IST
Last Updated 29 ಆಗಸ್ಟ್ 2024, 4:54 IST
ಅಕ್ಷರ ಗಾತ್ರ

ಕಾರಟಗಿ: ಸಾಮೂಹಿಕ ವಿವಾಹಗಳು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೇ, ಗುರು, ಹಿರಿಯರ ಸಮ್ಮುಖದಲ್ಲಿ ನಡೆಯುವುದರಿಂದ ದಂಪತಿಗಳಲ್ಲದೆ ಪಾಲಕರೂ ಆತಂಕ ಮುಕ್ತತೆಯಿಂದ ಇರಲು ಸಾಧ್ಯವಾಗಿದೆ. ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ ಎಂದು ಬುಕ್ಕಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ನಡೆದಿರುವ ಶರಣಬಸವೇಶ್ವರ ಪುರಾಣ ಪ್ರವಚನದ ನಿಮಿತ್ತ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳಿಗೆ ಶುಭ ಕೋರಿ ಮಾತನಾಡಿದರು.
ಮಿತ ಸಂತಾನದೊಂದಿಗೆ ಸಾಮರಸ್ಯದ, ಸುಖಕರ ಜೀವನ ನಡೆಸಿ, ಜೀವನದಲ್ಲಿ ಸಾರ್ಥಕತೆ ಮೆರೆಯಿರಿ ಎಂದವರು ಕಿವಿಮಾತು ಹೇಳಿದರು.


ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ಇಂದು ʼಶರಣಬಸವೇಶ್ವರ ಹಾಗೂ ಮಹಾದೇವಮ್ಮʼರ ಪುರಾಣದ ಸಂದರ್ಭದಲ್ಲಿಯ ವಿವಾಹ ಮಹೂರ್ತದಲ್ಲಿ ನಿಮ್ಮ ದಾಂಪತ್ಯ ಜೀವನ ಆರಂಭವಾಗಿದೆ. ಯಶಸ್ವಿ, ಸುಖಕರ ಜೀವನ ನಿಮ್ಮದಾಗಲಿ ಎಂದರು.

6 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪುರಾಣ ಪ್ರವಚನಕಾರ ಸಿದ್ದೇಶ್ವರ ಶಾಸ್ತ್ರಿ ಹಿರೇಮಠ, ಸಂಗೀತಗಾರರಾದ ಮನೋಹರ ಪಿ. ಹಿರೇಮಠ, ಚಂದ್ರಯ್ಯಸ್ವಾಮಿ, ಪುರಾಣ ಸಮಿತಿಯ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT