ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಅಂಗಳದಲ್ಲಿ ತಾರಾಲಯ ಮಾದರಿ

Last Updated 24 ಸೆಪ್ಟೆಂಬರ್ 2022, 12:34 IST
ಅಕ್ಷರ ಗಾತ್ರ

ಕೊಪ್ಪಳ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ತಾಲ್ಲೂಕಿನ ಹ್ಯಾಟಿ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಹಿರಿಯ ಪ್ರಾಥಮಿಕ ‘ಶಾಲೆ ಅಂಗಳದಲ್ಲಿ ತಾರಾಲಯ’ ಕಾರ್ಯಕ್ರಮ ಜರುಗಿತು.

ಇಲಾಖೆ ಮುಖ್ಯಸ್ಥರು ವಿಜ್ಞಾನ ಉಪಕರಣಗಳಿರುವ ಸುಸಜ್ಜಿತವಾದ ವ್ಯಾನ್ ಹೊಂದಿದ್ದು, ಮಕ್ಕಳಿಗೆ ದೊಡ್ಡ ಪ್ರಮಾಣದ ಬಲೂನಿನಾಕಾರದ ಮಾದರಿಯಲ್ಲಿ ಕೊಠಡಿಯೊಳಗೆ ನೇರವಾಗಿ ಬಾಹ್ಯಾಕಾಶದಲ್ಲಿ ನಕ್ಷತ್ರಗಳ ಉಗಮ, ರಚನೆ, ಅಂತ್ಯ, ನಕ್ಷತ್ರಗಳ ರೂಪುಗೊಳ್ಳುವಿಕೆ ಬಗ್ಗೆ 3ಡಿ ಆಯಾಮದ ವಿಡಿಯೊಗಳನ್ನು ತೋರಿಸಿದರು.

ಈ ವಾಹನ ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪ್ರದರ್ಶನ ನೀಡುತ್ತಿದೆ. ಸಂಯೋಜಕರಾಗಿ ಚರಂತಯ್ಯ ಹಾಗೂ ತಾಂತ್ರಿಕ ಸಹಾಯಕರಾಗಿ ಚನ್ನಬಸಪ್ಪ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT