ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ಸೇನೆಯಲ್ಲಿ ಶಹಾಪುರದ ಯುವಕ

ಬ್ರಿಟನ್‌ ಪೌರತ್ವ: ಜಾಸ್ಮಿನ್‌ ಜತೆ ವಿವಾಹ
Last Updated 5 ಜುಲೈ 2021, 19:31 IST
ಅಕ್ಷರ ಗಾತ್ರ

ಕೊಪ್ಪಳ: ಗೋವಾದ ಬೀಚ್‌ನಲ್ಲಿ ಕಡಲೆಕಾಯಿ ಮಾರುತ್ತಿದ್ದ ಜಿಲ್ಲೆಯ ‘ಅನಾಥ’ ಯುವಕ ಗೋಪಾಲ ವಾಕೋಡೆ, ಬ್ರಿಟನ್‌ ದಂಪತಿ ನೆರವಿ
ನೊಂದಿಗೆ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ಸೈನ್ಯದಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ತಾಲ್ಲೂಕಿನ ಶಹಾಪುರ ಗ್ರಾಮದಯಲ್ಲಪ್ಪ ವಾಕೋಡೆ ಮತ್ತು ಫಕೀರವ್ವ ದಂಪತಿಯ ಐವರು ಮಕ್ಕಳಲ್ಲಿ ಗೋಪಾಲ ಎರಡನೇ ಮಗ. ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದ ಕೂಲಿ ಅರಸಿ 10ನೇ ವಯಸ್ಸಿನಲ್ಲಿ ಪಾಲಕರ ಸಮೇತ ಗೋವಾಕ್ಕೆ ದುಡಿಯಲು ವಲಸೆ ಹೋದರು.

ತಂದೆ, ತಾಯಿ ಜತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ತಂದೆ ಅಕಾಲಮೃತ್ಯುವಿಗೆ ತುತ್ತಾದರು. ಇದೇ ಕೊರಗಿನಲ್ಲಿಯೇ ತಾಯಿಯೂ ತೀರಿಕೊಂಡರು. ಬಂಧುಗಳ ಆಶ್ರಯದಲ್ಲಿ ಬೆಳೆದ ಅವರು 16ನೇ ವಯಸ್ಸಿಗೆ ಗೋವಾದ ಸಮುದ್ರ ತೀರಗಳಲ್ಲಿ ಕಡಲೆಕಾಯಿ ವ್ಯಾಪಾರ ಮಾಡಿಕೊಂಡು 9ನೇ ತರಗತಿವರೆಗೆ ಶಿಕ್ಷಣ ಪೂರೈಸಿದರು.

ಬ್ರಿಟಿಷ್‌ ದಂಪತಿ ಕಣ್ಣಿಗೆ ಬಿದ್ದ ಬಾಲಕ: ಗೋಪಾಲ ಉತ್ಸಾಹ ಮತ್ತು ಚುರುಕುತನದಿಂದ ಪ್ರವಾಸಿಗಳ ಮನಗೆದ್ದಿದ್ದರು. ಇಂಗ್ಲೆಂಡ್‌ನಿಂದ ಪ್ರತಿವರ್ಷ ಭಾರತ ಪ್ರವಾಸಕ್ಕೆ ಬರುತ್ತಿದ್ದಬ್ರಿಟ್ಸ್ ಕೊರೊಲ್ ಥಾಮಸ್ ಮತ್ತು ಕೊಲಿನ್ ಹ್ಯಾನ್ಸನ್ ಎನ್ನುವ ಬ್ರಿಟಿಷ್‌ ದಂಪತಿ ತಮ್ಮ ಸಹವರ್ತಿಲಿಂಡಾ ಹ್ಯಾನ್ಸನ್ ಅವರೊಂದಿಗೆ ಬಂದಾಗ ಬಾಲಕ ಕಣ್ಣಿಗೆ ಬಿದ್ದ.

ಗೋವಾದ ಬೆತೆಲ್ ಬಾತಿ ಬೀಚ್‌ನಲ್ಲಿ ಉರಿಬಿಸಿಲು ಲೆಕ್ಕಿಸದೇ ಕಡಲೆ ವ್ಯಾಪಾರ ಮಾಡುತ್ತಿದ್ದ ಬಾಲಕನ ಮುಗ್ಧತೆ, ಮಾತು ಬ್ರಿಟಿಷ್‌ ದಂಪತಿಯ ಗಮನಸೆಳೆಯಿತು. ಆತ ವಾಸಿಸುವ ಗುಡಿಸಲಿಗೆ ಭೇಟಿ ನೀಡಿ ಹೊಸಬಟ್ಟೆ, ಕಡಲೆ ಮಾರುವ ಬುಟ್ಟಿ, ಗಡಿಯಾರ ಕೊಡಿಸಿದರು. ಪ್ರತಿವರ್ಷ ಬಂದಾಗ ಬಾಲಕನನ್ನು ಮತ್ತು ಅವರ ಮನೆಯವರನ್ನು ಭೇಟಿ ಮಾಡಿ ಆತನಿಗೆ ಉತ್ತಮ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದರಲ್ಲದೆ ತಮ್ಮ ಜತೆ ಕಳುಹಿಸಿದರೆ ಪಾಲನೆ ಮಾಡುವುದಾಗಿ ಭರವಸೆ ನೀಡಿದರು.

ಆ ದಂಪತಿ ವಿಶ್ವಾಸ ಕಂಡು ಗೋಪಾಲನ ಸಹೋದರರು ಅವರೊಂದಿಗೆ ತೆರಳಲು ಒಪ್ಪಿಗೆ ನೀಡಿದರು. ಗೋಪಾಲ ತಮ್ಮ 19ನೇ ವಯಸ್ಸಿನಲ್ಲಿ ಬ್ರಿಟನ್‌ ಸೇರಿದರು. ಅಲ್ಲಿಬ್ರಿಟ್ಸ್ ಕೊರೊಲ್ ಥಾಮಸ್ ದಂಪತಿ ಕ್ರೀಡಾ ತರಬೇತಿ ಕೊಡಿಸಿದರು. ಗೋಪಾಲ ಅವರ ಬುದ್ಧಿಮತ್ತೆ, ಕುಶಲತೆ ಕಂಡು ಬ್ರಿಟಿಷ್‌ ಸೈನ್ಯಕ್ಕೆ ಸೇರಿಸಲು ತರಬೇತಿ ನೀಡಿದರು. ಅದರಂತೆ ಸೈನ್ಯಕ್ಕೆ ಆಯ್ಕೆಯಾಗುವ ಮೂಲಕ ಹೆತ್ತವರಿಗೂ, ಗ್ರಾಮಕ್ಕೂ, ತನ್ನನ್ನು ಪೋಷಿಸಿದ ಪಾಲಕರಿಗೂ ಕೀರ್ತಿ ತಂದಿದ್ದಾರೆ.

ಸೈನ್ಯಕ್ಕೆ ಸೇರಿ ಆಫ್ಗಾನಿಸ್ತಾನ, ಕೆನ್ಯಾ ಮತ್ತು ಜರ್ಮನಿಯಲ್ಲೂ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹುಟ್ಟೂರಿ
ನೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರತಿ ಮೂರು ವರ್ಷಗಳಿಗೊಮ್ಮೆ ಭೇಟಿ ನೀಡಿ ಸಹೋದರ, ಸಹೋದರಿಯರ ಮದುವೆ ಮಾಡಿ, ಮನೆ ಕಟ್ಟಿಸಿ ಕೊಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

*
ಬಡತನ, ದಾರಿದ್ರ್ಯ ಮೆಟ್ಟಿ ನಿಂತು ತನ್ನತನ ನಿರೂಪಿಸಿದ್ದಾನೆ. ಬ್ರಿಟಿಷರು ಆತನ ಗುಣ– ಸ್ವಭಾವ ಕಂಡು ಒಬ್ಬ ಉತ್ತಮ ನಾಗರಿಕನನ್ನಾಗಿ ಬೆಳೆಸಿದ್ದಾರೆ. ಆತ ನಮ್ಮೂರಿನ ಹುಡುಗನೆಂಬ ಹೆಮ್ಮೆ ನಮಗಿದೆ
-ರಾಜು ಪಾಟೀಲ, ರಾಮದ ಮುಖಂಡ

*
ಬಡತನ, ದಾರಿದ್ರ್ಯ ಮೆಟ್ಟಿ ನಿಂತು ತನ್ನತನ ನಿರೂಪಿಸಿದ್ದಾನೆ. ಬ್ರಿಟಿಷರು ಆತನ ಗುಣ– ಸ್ವಭಾವ ಕಂಡು ಒಬ್ಬ ಉತ್ತಮ ನಾಗರಿಕನನ್ನಾಗಿ ಬೆಳೆಸಿದ್ದಾರೆ. ಆತ ನಮ್ಮೂರಿನ ಹುಡುಗನೆಂಬ ಹೆಮ್ಮೆ ನಮಗಿದೆ.
-ರಾಜು ಪಾಟೀಲ, ಗ್ರಾಮದ ಮುಖಂಡ

*
ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಯಿತು. ಸದಾ ಉನ್ನತ ಕನಸು ಕಾಣುತ್ತಿದ್ದ ನನಗೆ ಬ್ರಿಟಿಷ್‌ ದಂಪತಿ ತಮ್ಮ ಮಕ್ಕಳಂತೆ ಸಾಕಿ ಜೀವನವನ್ನು ನೀಡಿದ್ದಾರೆ. ಅವರ ಋಣ ಮರೆಯಲು ಸಾಧ್ಯವಿಲ್ಲ.
-ಗೋಪಾಲ ಯಲ್ಲಪ್ಪ ವಾಕೋಡೆ, ಸೈನ್ಯ ಸೇರಿದ ಅನಿವಾಸಿ ಭಾರತೀಯ

*
ತಂದೆ–ತಾಯಿ ನಿಧನರಾದ ಬಳಿಕ ಬೇರೆ ದಾರಿ ಕಾಣದೇ ಕಡಲೆಕಾಯಿ ಮಾರಿಕೊಂಡು ಜೀವನ ಮಾಡುತ್ತಿದ್ದ ಗೋಪಿ ಈಗ ಬ್ರಿಟಿಷ್ ಸೈನ್ಯದಲ್ಲಿ ಸೇವೆ ಮಾಡುತ್ತಿದ್ದಾನೆ. ಆತ ನಮಗೆ ಮಾದರಿ
-ಸಾವಿತ್ರಿ ನಾಗೇಶ್ ಸಿಂಧೆ, ಗೋಪಾಲ ಅವರ ಚಿಕ್ಕಮ್ಮ

*
ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಜೀವನದಲ್ಲಿ ಸಾಧನೆ ಮಾಡಲು ಪ್ರೇರಣೆಯಾಯಿತು. ಸದಾ ಉನ್ನತ ಕನಸು ಕಾಣುತ್ತಿದ್ದ ನನಗೆ ಬ್ರಿಟಿಷ್‌ ದಂಪತಿ ತಮ್ಮ ಮಕ್ಕಳಂತೆ ಸಾಕಿ ಜೀವನವನ್ನು ನೀಡಿದ್ದಾರೆ. ಅವರ ಋಣ ಮರೆಯಲು ಸಾಧ್ಯವಿಲ್ಲ.
-ಗೋಪಾಲ ಯಲ್ಲಪ್ಪ ವಾಕೋಡೆ, ಸೈನ್ಯ ಸೇರಿದ ಅನಿವಾಸಿ ಭಾರತೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT