ಶುಕ್ರವಾರ, ಜನವರಿ 27, 2023
27 °C

ಅಪಘಾತ: ಡಿಎಸ್‌ಎಸ್ ಮುಖಂಡ ಸೇರಿ ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಇಲ್ಲಿನ ಕುಷ್ಟಗಿ ರಸ್ತೆಯ ಭಾಗ್ಯನಗರ ಕ್ರಾಸ್ ಸಮೀಪ ಶನಿವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶರಣಪ್ಪ ಲೇಬಗೇರಿ (45) ಮೃತಪಟ್ಟಿದ್ದಾರೆ.

ಮೆಕ್ಕೆಜೋಳ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್‌ ಪಂಕ್ಚರ್ ಆಗಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಸುತ್ತಲೂ ಕತ್ತಲಿದ್ದ ಕಾರಣ ಟ್ರ್ಯಾಕ್ಟರ್‌ ಕಾಣಿಸದೆ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದ ಶರಣಪ್ಪ ಹಾಗೂ ಜೊತೆಗಾರ ಹಿಂಭಾಗದಿಂದ ಗುದ್ದಿದ್ದಾರೆ ಎನ್ನಲಾಗಿದೆ. ತಲೆಗೆ ಜೋರು ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶರಣಪ್ಪ ಅವರ ಜೊತೆಗೆ ಮೃತಪಟ್ಟಿರುವ ಇಬ್ಬೊಬ್ಬರು ಮೂಲತಃ ಬಾದಾಮಿ ಹತ್ತಿರದ ಜಾಲಿಹಾಳದವರು ಎಂದು ಗೊತ್ತಾಗಿದೆ. ಕೆಲ ವರ್ಷಗಳಿಂದ ಕೊಪ್ಪಳ ತಾಲ್ಲೂಕಿನ ಲೇಬಗೇರಿಯಲ್ಲಿ ನೆಲೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು