ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಕಣಜದಲ್ಲಿ ಸಾಸಿವೆ ಬೆಳೆಯ ಅಬ್ಬರ

Last Updated 29 ಮಾರ್ಚ್ 2019, 19:45 IST
ಅಕ್ಷರ ಗಾತ್ರ

ಕಾರಟಗಿ:ಭತ್ತದ ಕಣಜದಲ್ಲಿ ಎಲ್ಲೆಂದರಲ್ಲಿ ಹಸಿರಿನಿಂದ ಕಂಗೊಳಿಸಬೇಕಿದ್ದ ಜಮೀನು ಈಗ ಹಾಳು ಸುರಿಯುತ್ತಿವೆ. ಒಣ ಹುಲ್ಲು, ಬಿರುಕು ಬಿಟ್ಟ ನೆಲ, ಮಳೆ ಕೊರತೆ, ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆಯಿಂದ2ನೇ ಬೆಳೆಗೆ ನೀರು ಬಾರದೇರೈತರು ಕಂಗಾಲಾಗಿದ್ದಾರೆ.

ಭತ್ತಕ್ಕೆ ಪರ್ಯಾಯವೇ ಇಲ್ಲ ಎಂಬಂತೆ ಸಿದ್ದರಾಗಿರುವ ರೈತರ ಮಧ್ಯೆ ಇರುವ ವಾತಾವರಣದ ಮೇಲೆ ಮೇಲೆದ್ದು, ಫಲ ಹಾಗೂ ಲಾಭ ನೀಡುವ ಬೆಳೆಯತ್ತಅನೇಕರು ಅನಿವಾರ್ಯವಾಗಿ ವಾಲಿದ್ದಾರೆ. ಇದರ ಪರಿಣಾಮವಾಗಿ ಭತ್ತದ ಹಸಿರಿನ ಬದಲಾಗಿ ಸಾಸಿವೆಯ ಹಳದಿ ಹೂವಿನ ಘಮಲು ಕಾಣುತ್ತಿದೆ. ಸಾಸಿವೆಅಥವಾ ಪಿಳಿಪಿಸಿರುವ ಹಾಕಿದ ರೈತರು ಜೀವನ ನಿರ್ವಹಣೆಗೆ ಬೇಕಾದ ಲಾಭ ತಗೆಯುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸಾಬೀತು ಆಗಿದೆ.

ಎಡದಂಡೆ ನಾಲೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಸಾಸಿವೆ ಬೆಳೆಯ ಹಳದಿ ಹೂ ಬರ ಪರಿಸ್ಥಿತಿಯ ತೀವ್ರತೆಯನ್ನು ಕೊಂಚಮಟ್ಟಿಗೆ ಮರೆಮಾಚಿಸಿದೆ. ಮಸಾರಿಭೂಮಿಯಲ್ಲಿ ಸಾಧ್ಯವಿಲ್ಲದ ಸಾಸಿವೆ ಅಥವಾ ಪಿಳಿಪಿಸಿರು ಬೆಳೆ ಕಪ್ಪು ಮಣ್ಣಿನಲ್ಲಿ ಎಲ್ಲೆಂದರಲ್ಲಿ ಆಕರ್ಷಕವಾಗಿ ಕಾಣಿಸುತ್ತಿದೆ.ಪಟ್ಟಣದ ಸಾಲೋಣಿಯ ನಿವಾಸಿ ಈರಪ್ಪ ಸುದ್ದಿ ಎಂಬ ರೈತ 10 ಎಕರೆಯಲ್ಲಿ ಸಾಸಿವೆ ಹಾಕಿದ್ದರು. 2 ಎಕರೆಯಲ್ಲಿ ಎಕರೆಗೆ 4. 5 ಕ್ವಿಂಟಲ್‌ನಂತೆಉಳಿಧೆಡೆ ಸಾಧಾರಣ ಬೆಳೆ ಬಂದಿದ್ದು, ಒಟ್ಟು 23 ಕ್ವಿಂಟಲ್ ಸಾಸಿವೆಯನ್ನು ಕ್ವಿಂಟಲ್‌ಗೆ ₹ 3 ಸಾವಿರದಂತೆ ಮಾರಾಟ ಮಾಡಿದ್ದಾರೆ.

'ಒಂದು ಎಕರೆ ಬೀಜದ ಚೀಲಕ್ಕೆ₹ 60, ಗೊಬ್ಬರಕ್ಕೆ ₹ 300, ಕ್ರಿಮಿನಾಶಕಕ್ಕೆ₹ 500 ಖರ್ಚು ಮಾಡಲಾಗಿದೆ.ಎಕರೆಗೆ ಹೆಚ್ಚೆಂದರೂ ಒಂದು ಸಾವಿರ ಖರ್ಚಾಗುವುದು. ಕನಿಷ್ಟ ₹ 2 ಸಾವಿರ ಲಾಭ ಬಂದಿದೆ. ಹಿಂದೆ ಇದೇ ಬೆಳೆ ಎಕರೆಗೆ ₹ 6 ಸಾವಿರ ಲಾಭ ಬರುವಂತೆಮಾರ್ಕೆಟ್‌ ದರ ಇತ್ತು. ಜಮೀನು ಖಾಲಿ ಬಿಡುವ ಬದಲು ನೀರು ಬೇಕಿಲ್ಲದೇ ವಾತಾವರಣದ ಮೇಲೆ ಬೆಳೆಯುವ ಸಾಸಿವೆ ಅಥವಾಪಿಳಿಪಿಸಿರು ಬೆಳೆ ಹಾಕಲು ರೈತರು ಮುಂದಾದರೆ, ’ಬರ’ ಎಂಬುದು ಮರೆಯಾಗುವುದು' ಎನ್ನುತ್ತಾರೆ.

ರೈತರಾದ ಗೋಮರ್ಸಿ ರಂಗಪ್ಪ ಮಾತನಾಡಿ, '2 ಎಕರೆಯಲ್ಲಿ ಸಾಸಿವೆ ಹಾಕಿದ್ದೆನು. ಖರ್ಚೆಲ್ಲಾ ಹೋಗಿ ಐದಾರು ಸಾವಿರ ಲಾಭ ಬಂದಿದೆ. ರೈತರು ಜಮೀನುಮತ್ತು ಅವರು ಖಾಲಿ ಇರದೇ ಭೂತಾಯಿಯನ್ನು ನಂಬಿದರೆ ಜೀವನ ನಡೆಸುವುದಕ್ಕಂತೂ ಯಾವುದೇ ತೊಂದರೆ ಇಲ್ಲ' ಎನ್ನುತ್ತಾರೆ.

ರಾಜ್ಯ ರೈತ ಸಂಘದ ಮರಿಯಪ್ಪ ಸಾಲೋಣಿ ಮಾತನಾಡಿ, ನಮ್ಮ ಭಾಗದಲ್ಲಿ ಭತ್ತ ಬೆಳೆಯುವುದೇ ಪ್ರತಿಷ್ಟೆ ಎಂದುಕೊಂಡಿದ್ದಾರೆ. ಭತ್ತದ ಬೆಳೆ ಕೈಕೊಟ್ಟರೆ ಲಕ್ಷಾಂತರ ಹಾನಿಯಾಗಬಹುದು ಅಥವಾ ಹತ್ತಾರು ಸಾವಿರ ನಷ್ಟವಾಗಬಹುದು. ಆದರೆ ಸಾಸಿವೆ ಅಥವಾ ಪಿಳಿಪಿಸಿರು ಬೆಳೆದರೆ ಸಾವಿರಾರು ರೂಪಾಯಿ ಖರ್ಚುಮಾಡಿ, ಹತ್ತಾರು ಸಾವಿರ ಲಾಭ ಪಡೆಯಬಹುದು. ನಮ್ಮಭಾಗದ ರೈತರಿಗೆ ಇದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ. ಬೇರೆಡೆ ಸಾಸಿವೆ ಅಥವಾ ಪಿಳಿಪಿಸಿರು ಸಮರ್ಥವಾಗಿ ಬೆಳೆಯುವರು. ಈ ಬೆಳೆ ಅನೇಕ ರೀತಿಯಲ್ಲಿ ಲಾಭಧಾಯಕವಾಗಿದೆ ಎನ್ನುತ್ತಾರೆ.

ಪಿಳಿಪಿಸಿರು ಮಾರಾಟ ಮಾಡಲು ಬೀಜ ಬರುವುದು. ಭೂಮಿಗೆ ಗೊಬ್ಬರದ ಜೊತೆಗೆ ನಂಬಿದ ರೈತರ ಜೀವನಕ್ಕೆ ಆಧಾರವೂ ಆಗುತ್ತದೆ ಎಂದು ಸಾಲೋಣಿ ಮರಿಯಪ್ಪ ಅಭಿಪ್ರಾಯಪಟ್ಟರಲ್ಲದೇ, ಭೂಮಿ ತಾಯಿಯನ್ನು ರೈತ ನಂಬಿದರೆ, ’ಬರ’ ಮಾಯವಾಗಿ, ಸದಾ ಲಾಭದತ್ತ ರೈತ ಸಾಗಬಹುದು ಎಂದರು.

ಪಟ್ಟಣ ಸೇರಿದಂತೆ ಸಮೀಪದ ಶ್ರೀರಾಮನಗರ, ರವಿನಗರ, ಬರಗೂರು, ಈಳಿಗನೂರು, ಬೆನ್ನೂರು, ತಿಮ್ಮಾಪುರ, ಕಾರಟಗಿ, ಚಳ್ಳೂರು ಮೊದಲಾದ ಗ್ರಾಮಗಳಜಮೀನುಗಳಲ್ಲಿ ಸಾಸಿವೆ ಬೆಳೆಯ ಹಳದಿ ಬಣ್ಣದಿಂದ ಸಿಂಗಾರಗೊಂಡಿದೆ.

ರೈತರು ಸಾಸಿವೆ ಬೆಳೆಯಲು ಹೆಣಗಾಡಬೇಕಿಲ್ಲ. ಭತ್ತ ಕೊಯ್ಯುವ ಮುನ್ನಾ ಹರಿಸುವ ಕೊನೆಯ ನೀರಿನೊಂದಿಗೆ ಬೀಜಗಳನ್ನು ಹಾಕಬಹುದಾಗಿದೆ. ಇದೇತೇವಾಂಶದಲ್ಲಿ ಬೆಳೆ ಬೆಳೆಯುವುದು. ಗೊಬ್ಬರ, ಕ್ರಿಮಿನಾಶಕದ ಅವಶ್ಯಕತೆಯೂ ಇಲ್ಲ. ಅಧಿಕ ಬೆಳೆ ಬಂದೀತು ಎಂಬ ಲೆಕ್ಕಾಚಾರದಲ್ಲಿ ಕೆಲವರು ಗೊಬ್ಬರ, ಕ್ರಿಮಿನಾಶಕ ಉಪಯೋಗಿಸುವರು.

ಮಾರಾಟ: ಪಕ್ಕದ ತಾಲ್ಲೂಕುಗಳಾದ ಸಿಂಧನೂರು, ಗಂಗಾವತಿಗಳ ಮಾರುಕಟ್ಟೆ ಇದೆ. ಆಂಧ್ರ ಪ್ರದೇಶಕ್ಕೆ ಹೆಚ್ಚಾಗಿ ಸಾಗಣೆಯಾಗುತ್ತಿದೆ. ಕಳೆದ ವರ್ಷ ಸಾಸಿವೆಪ್ರತಿ ಕ್ವಿಂಟಲ್‌ಗೆ ₹ 7 ಸಾವಿರವರೆಗೆ ಮಾರಾಟ ಆಗಿದ್ದನ್ನು ರೈತರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT