ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಲ್ಲಿಯೇ ತೃಪ್ತಿಕಂಡ ದಂಪತಿ

ಸಿರಿಧಾನ್ಯದಲ್ಲಿ
Last Updated 4 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೊಪ್ಪಳ: ಭೂಮಿಯ ಫಲವತ್ತತೆ, ರಾಸಾಯನಿಕ ಮುಕ್ತ ಧಾನ್ಯ ಬೆಳೆಯುವಲ್ಲಿ ಜಿಲ್ಲೆಯ ರೈತರನ್ನು ಜಾಗೃತಿಗೊಳಿಸುತ್ತಿರುವ ಜೊತೆಗೆ ಸ್ವತಃ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕ ದಂಪತಿಕಾರ್ಯಮಾದರಿಯಾಗಿದೆ.

ನಗರದಲ್ಲಿ 'ಸಿರಿ ಸಮಷ್ಠಿ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯಾವುದೇ ಲಾಭದ ಉದ್ದೇಶವಿಲ್ಲದೆ ರಂಗನಾಥ ಆಚಾರ್ಯ ಗಂಗೂರ ಎಂಬುವರಿಂದ 14 ಎಕರೆ ಕೃಷಿ ಭೂಮಿಯನ್ನು ತಮ್ಮ ಪ್ರಯೋಗಕ್ಕೆ ಪಡೆದುಕೊಂಡು ಯಶಸ್ವಿಯಾದ ಡಾ.ಅನುರಾಧಾ ಮತ್ತು ಶೇಷಗಿರಿ ಗುಬ್ಬಿ ದಂಪತಿಯ ಸಾವಯವ ಕೃಷಿಗೆ ಈಗ ಯಶಸ್ಸು ದೊರೆತಿದೆ.

ಸಮೀಪದ ಬೆಳವಿನಹಾಳ ಗ್ರಾಮದಲ್ಲಿರುವ ಜಮೀನಿನಲ್ಲಿ ಅರ್ಧ ಎಕರೆಯಲ್ಲಿ 200 ಕೆಜಿ ಹಸಿ ಮೆಣಸಿನ ಕಾಯಿಯನ್ನು ಮೂರು ಸಾರಿ ಕಟಾವು ಮಾಡಿ65 ಸಾವಿರ ಲಾಭ ಗಳಿಸಿದ್ದಾರೆ. ಅರ್ಧ ಎಕರೆಯಲ್ಲಿ 22 ದೇಶಿ ತರಕಾರಿ ಬೀಜಗಳನ್ನು ನಾಟಿ ಮಾಡಿ ಸಾವಯವ ಪದ್ಧತಿಯಲ್ಲಿ ಬೆಳೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮೆಣಸಿನ ಕಾಯಿ ಜೊತೆಗೆ ಸಾವಯವದಲ್ಲಿ ಬೆಳೆದ ಲಿಂಬೆಹಣ್ಣನ್ನು ರೈತರೊಬ್ಬರಿಂದ ಖರೀದಿಸಿ ರಾಜಶ್ರೀ ಬನ್ನಿಗೋಳ ಎಂಬುವರ ಮೂಲಕ ಉಪ್ಪಿನಕಾಯಿ ತಯಾರಿಸಿ ಅದಕ್ಕೆ 'ಸಿರಿ, ಹುಳಿ, ಕಾರ' ಎಂಬ ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ದಂಪತಿಯ ಸಾವಯವ ಪ್ರಯೋಗಕ್ಕೆ ಕೃಷಿಕರು ತಲೆದೂಗಿದ್ದಾರೆ. ಜಿಲ್ಲೆಯಲ್ಲಿ ಸಾವಯವ ಕ್ಷೇತ್ರಕ್ಕೆ ವಿಫುಲ ಅವಕಾಶವಿದ್ದು, ತಮ್ಮ ಪ್ರಯೋಗಗಳ ಮೂಲಕ ರೈತರಿಗೆ ಲಾಭ ತರುವ ಕೃಷಿ ಬಗ್ಗೆ ಪಾಠವನ್ನು ಕೂಡಾ ಮಾಡುತ್ತಾರೆ.

2 ಎಕರೆಯಲ್ಲಿ ನವಣೆ, 1 ಎಕರೆಯಲ್ಲಿ ಬರಗ, ತಲಾ ಅರ್ಧ ಎಕರೆಯಲ್ಲಿ ಊದಲು, ಬರಗ, ಕೊರಲೆಯನ್ನು ಕೂಡಾ ಬೆಳೆದಿದ್ದಾರೆ. 6 ಸಿರಿಧಾನ್ಯಗಳನ್ನು ಪ್ರಾಯೋಗಿಕವಾಗಿ ಬೆಳೆದಿದ್ದು, 40 ಕ್ವಿಂಟಲ್ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸಿರಿಧಾನ್ಯಗಳಿಗೆ ಎಪಿಎಂಸಿ ನಿಗದಿ ಮಾಡುವ ಕನಿಷ್ಠ 35 ಬೆಲೆಗೆ ಅಲ್ಲದೆ, ಬೆಂಗಳೂರು, ಮುಂಬಯಿ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ 100 ಗೆ ಮಾರಾಟ ಮಾಡಿದ್ದಾರೆ.

ಒಣಬೇಸಾಯವನ್ನೇ ಹೊಂದಿರುವ ಕಲ್ಲತಾವರಗೇರಿ, ಕುಕನಪಳ್ಳಿ, ಗಬ್ಬೂರ ಮುಂತಾದ ಕಡೆ ಆಸಕ್ತ ರೈತರಿಗೆ ತಮ್ಮ ಸಿರಿಧಾನ್ಯಗಳ ಬೀಜಗಳನ್ನು ನೀಡುವ ಮೂಲಕ ರಾಸಾಯನಿಕ ಮುಕ್ತ ಸಾವಯವ ಧಾನ್ಯಗಳನ್ನು ಬೆಳೆಯುವಲ್ಲಿ ಪ್ರೇರೇಪಣೆ ನೀಡುತ್ತಿದ್ದಾರೆ.

ಅಕ್ಕಿ, ಗೋಧಿ, ರಾಗಿಯ ಹೆಸರನ್ನಷ್ಟೇ ಕೇಳಿರುವ ಇಂದಿನ ಯುವಕರಿಗೆ ಇವರ ಸಾವಯವ ಧಾನ್ಯದ ಕೃಷಿ ಅಚ್ಚರಿ ಮೂಡಿಸುತ್ತಿದೆಯಲ್ಲದೆ. ಆಸಕ್ತ ರೈತರು ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಕೃಷಿ ಇಲಾಖೆ ಕೂಡಾ 'ರೈತ ಸಿರಿ' ಯೋಜನೆಗೆ ಯಶೋಗಾಥೆ ತಿಳಿಸಲು ದಂಪತಿಯನ್ನು ಆಹ್ವಾನಿಸುತ್ತಾರೆ.

ಸಾವಯವ ಕೃಷಿ ಬಗ್ಗೆ ಧೈರ್ಯ ತುಂಬಿ ಅದಕ್ಕೆ ಮಾರುಕಟ್ಟೆಯನ್ನು ಒದಗಿಸುವ ಭರವಸೆಯನ್ನು ಶೇಷಗಿರಿ ಮತ್ತು ಅನುರಾಧಾ ದಂಪತಿ ನೀಡುತ್ತಾರೆ. ಯಾವುದೇ ರಾಸಾಯನಿಕ ಇಲ್ಲದೆ ಮುಂಗಾರು ಮಳೆ ನೆಚ್ಚಿಕೊಂಡು 14 ಎಕರೆ ಪ್ರದೇಶದಲ್ಲಿಹುಳ-ಹುಪ್ಪಟೆ ಕಾಟವಿಲ್ಲದೆ, ಮೋಡ ಕವಿದ ವಾತಾವರಣದಲ್ಲಿಯೇ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ತಮ್ಮನ್ನು ರೈತರು ಎಂದು ಕರೆದುಕೊಳ್ಳಲು ಇಷ್ಟ ಪಡದ ಇವರು, ಕೃಷಿ ವಿಜ್ಞಾನಿಗಳು ಎಂದೇ ಕರೆದುಕೊಳ್ಳುತ್ತಾರೆ. ಕೃಷಿಕರ ಶ್ರಮದಿಂದ ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವ ನಾವು ಬೀಜ, ಪೋಷಣೆ, ಮಾರ್ಗದರ್ಶನ ಮಾಡುತ್ತೇವೆ. ಹೊಲದಲ್ಲಿ ಕೆಲಸ ಮಾಡುವ ಕೃಷಿಕರಿಗೆ ಈ ಶ್ರೇಯ ದೊರಕಬೇಕು ಎಂದು ವಿನಮ್ರತೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT