ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಕೃಷಿ ತಜ್ಞ ಜಯಂತ ನಿಧನ

Last Updated 17 ಮೇ 2020, 22:02 IST
ಅಕ್ಷರ ಗಾತ್ರ

ಕೊಪ್ಪಳ: ಬಿಕನಳ್ಳಿಯ ನೈಸರ್ಗಿಕ ಕೃಷಿ ತಜ್ಞ ಜಯಂತ (53) ಭಾನುವಾರ ನಿಧನರಾದರು. ಕೆಲ ಕಾಲದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅವರ ಅಂತ್ಯಕ್ರಿಯೆ ಮಧ್ಯಾಹ್ನ ನೆರವೇರಿತು.

ಸಿವಿಲ್ ಎಂಜಿನಿಯರ್ ಆಗಿದ್ದಜಯಂತ್, ಥಾಯ್ಲೆಂಡ್ ಮತ್ತು ಮಲೇಷ್ಯಾದಲ್ಲಿ ಕೆಲಸ ಮಾಡಿದ್ದರು. 2007ರಲ್ಲಿ ಲಕ್ಷಾಂತರ ರೂಪಾಯಿವೇತನ ತ್ಯಜಿಸಿ,ಹುಟ್ಟೂರು ಬಿಕನಳ್ಳಿಗೆ ಬಂದು ಕೃಷಿಆರಂಭಿಸಿದ್ದರು. ಗಾಂಧಿ ತತ್ವ ಹಾಗೂ ಸರಳ ಜೀವನ ಪ್ರತಿಪಾದಿಸುತ್ತಿದ್ದರು.

ಸಿರಿಧಾನ್ಯಗಳ ಪೈಕಿ ಕೊರಲೆ (ಬ್ರೌನ್ ಟಾಪ್ ಮಿಲೆಟ್) ಧಾನ್ಯ ಹೆಚ್ಚು ಬೆಳೆದು, ಅದು ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಲು ಕಾರಣರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT