ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ: 936 ಸಿಬ್ಬಂದಿ ನಿಯೋಜನೆ

ಗಂಗಾವತಿ ತಾಲ್ಲೂಕು ಆಡಳಿತದಿಂದ ಸಿದ್ಧತೆ: ಸಿಬ್ಬಂದಿಗೆ ಮತಗಟ್ಟೆ ಸಾಮಗ್ರಿ ವಿತರಣೆ
Last Updated 26 ಡಿಸೆಂಬರ್ 2020, 13:21 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಿಗೆ ಡಿ.27 ರಂದು (ಭಾನುವಾರ) ಮತದಾನ ನಡೆಯಲಿದೆ. ಈಗಾಗಲೇ ತಾಲ್ಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.

ನಗರದ ಲಯನ್ಸ್‌ ಪ್ರೌಢ ಶಾಲೆಯಲ್ಲಿ ಶನಿವಾರ ಮತಗಟ್ಟೆ ಸಿಬ್ಬಂದಿಗೆ ಸಾಮಗ್ರಿ ವಿತರಿಸಲಾಯಿತು.

ತಹಶೀಲ್ದಾರ್‌ ಎಂ.ರೇಣುಕಾ ಮಾತನಾಡಿ,‘ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಾಮಗ್ರಿ ತೆಗೆದುಕೊಂಡು ಹೋಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಸಿಬ್ಬಂದಿಗೆ ಸಲಹೆ ನೀಡಿದರು.

ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ 347 ಸ್ಥಾನಗಳಲ್ಲಿ 23 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 324 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

156 ಮತಗಟ್ಟೆಗಳನ್ನು ತೆರೆಯಲಾಗಿದೆ. 16 ಸೂಕ್ಷ್ಮ, 16 ಅತಿಸೂಕ್ಷ್ಮ ಹಾಗೂ 124 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 936 ಸಿಬ್ಬಂದಿ ನಿಯೋಜಿಸಲಾಗಿದೆ.

ಬಿಗಿ ಬಂದೋಬಸ್ತ್‌ : ತಾಲ್ಲೂಕಿನ 156 ಮತಗಟ್ಟೆಗಳಿಗೆ ಒಬ್ಬರು ಡಿವೈಎಸ್ಪಿ, ಮೂವರು ಸಿಪಿಐ, ಐವರು ಪಿಎಸ್‌ಐ, 18 ಎಎಸ್‌ಐ, 50 ಹೆಡ್‌ ಕಾನ್‌ಸ್ಟೆಬಲ್‌, 64 ಪೊಲೀಸ್‌, 78 ಗೃಹರಕ್ಷಕ ದಳ ಸಿಬ್ಬಂದಿ ಸೇರಿ ಒಟ್ಟು 219 ಸಿಬ್ಬಂದಿಯನ್ನು ಹಾಗೂ ಒಂದು ಡಿಎಆರ್‌ ಹಾಗೂ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಚುನಾವಣೆ ನೋಡಲ್‌ ಅಧಿಕಾರಿ ಡಾ.ನಾಗರಾಜ, ತಾಲ್ಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್‌, ಸಿಡಿಪಿಒ ಗಂಗಪ್ಪ, ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ ಹಾಗೂ ಮಹೇಶ ದಲಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT