ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ರಂಜಿಸಿದ ತೊಗಲು ಗೊಂಬೆಯಾಟ

Last Updated 5 ಅಕ್ಟೋಬರ್ 2022, 13:55 IST
ಅಕ್ಷರ ಗಾತ್ರ

ಕೊಪ್ಪಳ: ಮಹಾಲಕ್ಷ್ಮಿ ಸಮಾಜಸೇವಾ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ಇಲ್ಲಿನ ಬಿ.ಟಿ.ಪಾಟೀಲ ನಗರದ ಸಿದ್ದಿವಿನಾಯಕ ದೇವಸ್ಥಾನ ಆವರಣದಲ್ಲಿ ತೊಗಲುಗೊಂಬೆ ಪ್ರದರ್ಶನ ರಂಜಿಸಿತು.

ಸಂಸ್ಥೆಯ ಅಧ್ಯಕ್ಷ ಲೋಕಪ್ಪ ಭಜಂತ್ರಿ ಮಾತನಾಡಿ ‘ಜಾನಪದ ಕಲೆಗಳಲ್ಲಿ ಒಂದಾದ ತೊಗಲುಗೊಂಬೆಯಾಟ ಅತ್ಯಂತ ಹಳೆಯ ಕಲೆಯಾಗಿದ್ದು, ಇತ್ತೀಚಿನ ದಿನದಲ್ಲಿ ಟಿ.ವಿ, ಸಿನಿಮಾ ಮಾಧ್ಯಮದಿಂದಾಗಿ ಕಲೆ ಮರೀಚಿಕೆಯಾಗುತ್ತಿದೆ. ರಾಮಾಯಣ ಹಾಗೂ ಮಹಾಭಾರತದಂತಹ ಕಾವ್ಯಗಳನ್ನು ಗೊಂಬೆಗಳ ಮೂಲಕ ಜನರಿಗೆ ಮುಟ್ಟುವಂತೆ ಈ ಕಲೆ ಆಕರ್ಷಣೆಗೊಂಡಿದೆ. ಇಂತಹ ಕಲೆಗಳಿಗೆ ಸರ್ಕಾರ ತರಬೇತಿ ಶಿಬಿರಗಳನ್ನು ಹಾಗೂ ಅಕಾಡೆಮಿಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಬೇಕು’ ಎಂದರು.

ನಗರಸಭೆ ಸದಸ್ಯ ಉಮಾ ಗವಿಸಿದ್ದಪ್ಪ ಪಾಟೀಲ, ಎಸ್‌ಬಿಐ ನಿವೃತ್ತ ವ್ಯವಸ್ಥಾಪಕ ಮುದುಕಪ್ಪ ಕುರಿ, ಮಾರುತಿ ಫಕೀರಪ್ಪ ಚಿಲವಾಡಗಿ, ಪ್ರಕಾಶ್ ಮೇದಾರ್, ಆನಂದ ಹರನಳ್ಳಿ, ವೆಂಕಟೇಶ ಪೂಜಾರ ಇದ್ದರು. ಜಾನಪದ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ವಸಂತಕುಮಾರ.ಕೆ ಮತ್ತು ತಂಡದವರಿಂದ ತೊಗಲುಗೊಂಬೆಯಾಟ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT