ಕಾರಟಗಿ: ಹೊಲದ ಕೆಲಸಕ್ಕೆ ತೆರಳಿದ್ದ ವೃದ್ದರೊಬ್ಬರು ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾದ ಘಟನೆ ತಾಲ್ಲೂಕಿನ ಬಸವಣ್ಣಕ್ಯಾಂಪ್‌ನಿಂದ ವರದಿಯಾಗಿದೆ. ಬೊಕ್ಕಾ ನರಸಿಂಹಮೂರ್ತಿ ಈಡಿಗೇರ (62) ಮೃತಪಟ್ಟವರು.
‘ಆ.14ರ ರಾತ್ರಿ ನರಸಿಂಹಮೂರ್ತಿ ತಮ್ಮ ಬೈಕ್, ಮೊಬೈಲ್‌ಅನ್ನು ಕಾಲುವೆಯ ಮೇಲೆ ಬಿಟ್ಟು ನಾಲೆಗೆ ಇಳಿದಾಗ ಜಾರಿ ಹೋಗಿರಬಹುದು. ಮರುದಿನ ಮನೆಯವರು, ನಮ್ಮ ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೊಂದಿಗೆ ನಾಲೆಯುದ್ದಕ್ಕೂ ಪರಿಶೀಲಿಸಿದರೂ ವ್ಯಕ್ತಿ ಪತ್ತೆಯಾಗಿರಲಿಲ್ಲ. ಗುರುವಾರ ಮೃತದೇಹವು ಭೀಮರಾಜಾ ಕ್ಯಾಂಪ್ ಬಳಿ ಪತ್ತೆಯಾಗಿದೆ. ವೃದ್ದರ ಪುತ್ರ ತಮ್ಮ ತಂದೆಯ ಮೃತದೇಹ ಎಂದು ಗುರುತಿಸಿದ್ದಾರೆ. ಇದೊಂದು ಸಹಜ ಸಾವು ಎಂದು ದೂರು ನೀಡಿದ್ದಾರೆ’ ಎಂದು ಇನ್‌ಸ್ಪೆಕ್ಟರ್ ಸಿದ್ರಾಮಯ್ಯಸ್ವಾಮಿ ಬಿ. ಎಂ. ತಿಳಿಸಿದರು.
ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.