ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿ: ಉತ್ಸವ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ

Last Updated 30 ಜುಲೈ 2022, 4:13 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅ.1ಕ್ಕೆ ಭೇಟಿ ನೀಡಿಲಿರುವ ಹಿನ್ನಲೆಯಲ್ಲಿ ಆನೆಗೊಂದಿ ಉತ್ಸವ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ.

ಒಂದು ಜೆಸಿಬಿ, ರೋಲರ್, ಮೋಟರ್ ಗಾರ್ಡರ್(ಮಣ್ಣು ಕೆತ್ತುವ ವಾಹನ)ದಿಂದ ಬೆಳಿಗ್ಗೆಯಿಂದ ಕಾಮಗಾರಿ ನಡೆಸಲಾಗುತ್ತಿದೆ. ತಾಲ್ಲೂಕು ಆಡಳಿತ ಒಂದೊಂದು ಇಲಾಖೆಗೆ ಒಂದೊಂದು ಜವಾಬ್ದಾರಿ ನೀಡಿದ್ದು, ಅದರಂತೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈದಾನದಲ್ಲಿ ಹೆಲಿಪ್ಯಾಡ್ ಸ್ಥಳ ಗುರುತಿಸಿ, ಕೇಂದ್ರ ಬಿಂದು ರಚನೆ ಮಾಡಿ, ಮಣ್ಣುತೆಗೆದು, ಮೊಹರಂ ಹಾಕಿ, ಎಚ್. ಪಾರ್ಕ್ ನಿರ್ಮಿಸುವ ಕೆಲಸ, ಹಾಗೇ ಸಿಎಂ ಹೆಲಿಕಾಪ್ಟರ್ ನಿಂದ ಇಳಿದ ನಂತರ ವಾಹನದಿಂದ ಅಂಜನಾದ್ರಿ ಬೆಟ್ಟಕ್ಕೆ ತೆರಳಲು ಮೈದಾನದಲ್ಲಿ ಸುಸಜ್ಜಿತ ರಸ್ತೆ ಮಾಡಲಾಗುತ್ತಿದೆ.

ಇನ್ನೂ ಆನೆಗೊಂದಿ ಗ್ರಾಮದಿಂದ ಮೈದಾನಕ್ಕೆ ಬರುವ ಡಾಂಬರು ರಸ್ತೆಯ ಎಡ ಮತ್ತು ಬಲಭಾಗದಲ್ಲಿನ ಬೆಳೆದ ಮುಳ್ಳುಕಂಟಿ, ಬಳ್ಳಿಗಳನ್ನು ಸಹ ವಾಹನದಿಂದ ಸ್ವಚ್ಚ ಮಾಡಲಾಗಿದೆ.

ನಂತರ ಆನೆಗೊಂದಿ ಗ್ರಾಮ ಪಂಚಾಯ್ತಿ ಪೌರಕಾರ್ಮಿಕರಿಂದ ಆನೆಗೊಂದಿ ಮೈದಾನದಲ್ಲಿನ ಕಸ, ಪ್ಲಾಸ್ಟಿಕ್, ಗಾಜು, ಕಟ್ಟಿಗೆಯನ್ನು ಕಸದ ವಾಹನದಲ್ಲಿ ಬೇರಡೆಗೆ ವರ್ಗಾಯಿಸ ಲಾಯಿತು. ಒಣಕಸವನ್ನ ಕಟ್ಟಿಗೆಯನ್ನ ಮೈದಾನ ಹೊರಗಡೆ ಸಂಗ್ರಹಿಸಿ ಸುಡಲಾಯಿತು.

ಹೆಲಿಪ್ಯಾಡ್ ಸ್ಥಳಕ್ಕೆ ತಹಶೀಲ್ದಾರ ಭೇಟಿ: ಆನೆಗೊಂದಿ ಮೈ ದಾನದಲ್ಲಿ ಸಿಎಂ ಅಂಜನಾದ್ರಿ ಭೇಟಿಗಾಗಿ ನಿರ್ಮಿಸುತ್ತಿರುವ ಹೆಲಿಪ್ಯಾಡ್ ನಿರ್ಮಾಣಕ್ಕೆ ತಹಶೀಲ್ದಾರ ಯು.ನಾಗರಾಜ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮೈದಾನದ ಕೊನೆಯಲ್ಲಿರುವ ವಿದ್ಯುತ್ ಕಂಬಗಳ ತಂತಿಗಳಿಂದ ಹೆಲಿಕಾಪ್ಟರ್ ಲ್ಯಾಂಡಿಗ್, ಟೇಕಾಫ್ ಗೆ ತೊಂದರೆ ಆಗಬಹುದೆಂದು ತಿಳಿದು ಗಂಗಾವತಿ ವಿದ್ಯುತ್ ಸರಬರಾಜು ಇಲಾಖೆ ಅಧಿಕಾರಿಗಳಿಗೆ ತಂತಿಗಳನ್ನ ತೆಗೆಯುವಂತೆ ಸೂಚನೆ ನೀಡಿದರು.

ಹಾಗೇ ಮೈದಾನದಲ್ಲಿರುವ (ದುರ್ಗಾದೇವಿ ದೇವಸ್ಥಾನ ಪಕ್ಕ) ಸೌಂಡ್ ಹಿಲೀಂಗ್ ಮ್ಯೂಸಿಕ್ ಮೆಡಿಟೇಶನ್ ಕೇಂದ್ರದ ಛತ್ತನ್ನು ಸ್ವಯಂ ಪೂರ್ವಕವಾಗಿ ತೆಗೆದು ಕೊಳ್ಳುವಂತೆ ಹನುಮನಹಳ್ಳಿ ಮೆಡಿಟೇಶನ್ ತರಬೇತಿದಾರ ಗಾಳೇಶ ಅವರಿಗೆ ತಿಳಿಸಿದರು.

ನಂತರ ಕಂದಾಯ, ಪಿಡಬ್ಲ್ಯೂಡಿ, ಜೆಸ್ಕಾಂ ಇಲಾಖೆ ಅಧಿಕಾ ರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವ ಹಿಸುವಂತೆ ಸೂಚನೆ ನೀಡಿದರು.

ಈ ವೇಳೆಯಲ್ಲಿ ಪಿಡಬ್ಲ್ಯೂಡಿ ಇಲಾಖೆ ಎಇಗಳಾದ ನಾಗರಾ ಜ, ವಿಶ್ವನಾಥ, ಎಇಇ ವಿರೇಶ್, ಜೆಸ್ಕಾಂ ಇಲಾಖೆಯ ಮಂಜುನಾಥ, ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮಿ, ಸಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT