ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯ ಆಂಜನೇಯನಿಗೆ ಹೈದರಾಬಾದ್ನ ದಾನಿ ಎಎಂಆರ್ ಪ್ರವೈಟ್ ಲಿಮಿಟೆಡ್ನ ಎ. ಮಹೇಶ ರೆಡ್ಡಿ ಅವರು ದೇಣಿಗೆಯಾಗಿ ನೀಡಿದ ಎಲ್ಲ ಆಭರಣ ಕವಚಗಳ ಪ್ರಮಾಣ ಒಟ್ಟು ಎಷ್ಟು ಎನ್ನುವುದರ ಬಗ್ಗೆ ಮರುಪರಿಶೀಲನೆ ಮಾಡಲಾಗಿದ್ದು ಅಕ್ಕಸಾಲಿಗರ ಲೆಕ್ಕದಿಂದಲೂ ನಿಖರತೆ ಲಭ್ಯವಾಗಿಲ್ಲ.

ಉದ್ಯಮಿ ಮಹೇಶ ರೆಡ್ಡಿ ಅವರು 1400 ಗ್ರಾಂ ಚಿನ್ನ ದೇವಸ್ಥಾನಕ್ಕೆ ನೀಡಿದ್ದು ಅದರ ಒಟ್ಟು ಮೌಲ್ಯ ₹2.5 ಕೋಟಿ ಎಂದು ಹೇಳಿದ್ದಾರೆ. ಅವರಿಗೆ ಆಭರಣ ತಯಾರಿಸಿಕೊಟ್ಟ ಗುಂಡಾಚಾರಿ ಎನ್ನುವವರು ವಾರಂಟಿ ಹಾಗೂ 50 ವರ್ಷಗಳ ಅವಧಿಗೆ ಗ್ಯಾರಂಟಿಯ ಬಾಂಡ್ ಕೊಟ್ಟಿದ್ದಾರೆ. ಇದರಲ್ಲಿ ಶೇ. 10ರಷ್ಟು ವೆಸ್ಟೇಜ್ ಇದೆ ಎಂದು ಅವರು ಹೇಳಿದ್ದಾರೆ. ಅನುಮಾನವಿದ್ದರೆ ಆಭರಣ ಕರಗಿಸಿ ಬಂಗಾರದ ಪ್ರಮಾಣ ಎಷ್ಟಿದೆ ಎನ್ನುವುದನ್ನು ತೋರಿಸಿಕೊಡುತ್ತೇನೆ. ಅದಕ್ಕೆ ತಗಲುವ ಖರ್ಚು ಅಂಜನಾದ್ರಿಯ ದೇವಸ್ಥಾನದ ಆಡಳಿತ ಭರಿಸಬೇಕು ಎನ್ನುವ ಷರತ್ತು ವಿಧಿಸಿದ್ದಾರೆ.

ಆಭರಣದ ಪ್ರಮಾಣದ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾದ ಬಳಿಕ ಜಿಲ್ಲಾಡಳಿತ ಮೊದಲು ಗಂಗಾವತಿಯ ಅಕ್ಕಸಾಲಿಗನ ಬಳಿ ತಪಾಸಣೆ ಮಾಡಿದಾಗ ಅವರಿಗೆ ಅದನ್ನು ಅಂದಾಜು ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಹುಲಿಗಿಯ ಅಕ್ಕಸಾಲಿಗರೊಬ್ಬರು 250ರಿಂದ 300 ಗ್ರಾಂ ಚಿನ್ನ ಇರಬಹುದು ಎಂದು ಅಂದಾಜಿಸಿದ್ದರು.
.ಅಂಜನಾದ್ರಿ ಬೆಟ್ಟ: ₹2.5 ಕೋಟಿ ಮೌಲ್ಯದ ಆಭರಣ ಸಮರ್ಪಣೆ.
ಜಿಲ್ಲಾಡಳಿತ ಈಗ ಪುನರ್ ತಪಾಸಣೆ ಮಾಡಿಸಿದ್ದು, ಹೊಸಪೇಟೆಯ ನಾಗರಾಜ ಆಚಾರಿ ಎನ್ನುವವರು ಸುಮಾರು ಒಂದು ಕೆ.ಜಿ. ಚಿನ್ನ ಇರಬಹುದು ಎಂದಿದ್ದರೆ, ಗೋಪಾಲ ಆಚಾರ್ ಎಂಬುವರು ಒಂದು ಕೆ.ಜಿ. 150 ಗ್ರಾಂ ಚಿನ್ನವಿದೆ ಎಂದು ಹೇಳಿದ್ದಾರೆ. ಶೇ. 10ರಷ್ಟು ವೇಸ್ಟೇಜ್ ಇರಬಹುದು ಎಂದು ಅಂದಾಜಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಳಿಕ ಜಿಲ್ಲಾಡಳಿತ ಹಟ್ಟಿ ಚಿನ್ನದ ಗಣಿ ಮೊರೆ ಹೋದಾಗ ಅಲ್ಲಿನ ಮುಖ್ಯಸ್ಥರು ಮೂಲ ಚಿನ್ನದ ಪ್ರಮಾಣ ಪತ್ತೆ ಹಚ್ಚಲು ನಮಗೆ ಅವಕಾಶವಿಲ್ಲ ಎಂದಿದ್ದಾರೆ. ಬಳಿಕ ಬಿಐಆಸ್ ಹಾಲ್ಮಾರ್ಕ್ ಕಂಪನಿಯವರನ್ನು ಕೇಳಿದ್ದು ಚಿನ್ನವನ್ನು ಈಗಾಗಲೇ ತಾಮ್ರದೊಂದಿಗೆ ಮಿಶ್ರಣ ಮಾಡಿದ್ದರಿಂದ ನಿಶ್ಚಿತ ಬಂಗಾರದ ಪ್ರಮಾಣ ಗೊತ್ತಾಗುವುದಿಲ್ಲವೆಂದು ಹೇಳಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ವಿವಿಧ ಅಕ್ಕಸಾಲಿಗರು ನೀಡಿದ ವರದಿಯನ್ನೇ ದಾಖಲೆಯಾಗಿರಿಸಿ ಆಭರಣವನ್ನು ಖಜಾನೆಯಲ್ಲಿ ಇರಿಸಿದ್ದಾರೆ.

ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಉದ್ಯಮಿ ಮಹೇಶ ರೆಡ್ಡಿ ಚಿನ್ನಲೇಪಿತ ಆಭರಣಗಳನ್ನು ಅಂಜನಾದ್ರಿಗೆ ನೀಡಿದ ಬಳಿಕ ಇದು ರಾಜಕೀಯ ಜಟಾಪಟಿಗೂ ಕಾರಣವಾಗಿದೆ.

ಉದ್ಯಮಿ ಕೊಟ್ಟಿದ್ದು ಏನು?

ದೇವಸ್ಥಾನಕ್ಕೆ ಮಹೇಶ ರೆಡ್ಡಿ ಆಂಜನೇಯನ ಪಾದಗಟ್ಟೆ ಬಳಿ ಚಿನ್ನ ಲೇಪಿತ ಪ್ರಭಾವಳಿ, ಛತ್ರಿ, ಕಿರೀಟ, ಗದೆ ನೀಡಿದ್ದರು. ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.