ಪ್ರಜಾವಾಣಿ ವಾರ್ತೆ

ಅಳವಂಡಿ: ಗ್ರಾಮದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ರಸ್ತೆ ಅಗಲೀಕರಣವನ್ನು ಕಡಿಮೆಗೊಳಿಸುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಗ್ರಾಮದ ವ್ಯಾಪಾರಸ್ಥರು ಮನವಿ ಸಲ್ಲಿಸಿದರು.

‘ಹಲವು ವರ್ಷಗಳಿಂದ ಗ್ರಾಮದ ರಸ್ತೆ ಬದಿ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ ರಾಜ್ಯ ಹೆದ್ದಾರಿ ಕಾಮಗಾರಿಯಿಂದ ರಸ್ತೆಯನ್ನು ಅಗಲೀಕರಣ ಮಾಡುವ ಹಿನ್ನೆಲೆಯಲ್ಲಿ ಅಂಗಡಿಯನ್ನು ತೆರವು ಗೊಳಿಸುವಂತೆ ಗ್ರಾಮ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ’ ಎಂದರು.

‘ರಾಜ್ಯ ಹೆದ್ದಾರಿ ಅಭಿವೃದ್ಧಿ ಮಾಡಲು ಗ್ರಾಮದ ಮುಖ್ಯ ರಸ್ತೆಯನ್ನು ಎಡ ಮತ್ತು ಬಲ ಭಾಗದಲ್ಲಿ 40 ಅಡಿಗಳಂತೆ ಒಟ್ಟು 80 ಅಡಿ ಅಗಲೀಕರಣ ಮಾಡಲು ತೀರ್ಮಾನಿಲಾಗಿದೆ . ಇದರಿಂದ ಸಣ್ಣ ವ್ಯಾಪಾರಸ್ಥರು ಬೀದಿಗೆ ಬರುವ ಸಾಧ್ಯತೆ ಎದುರಾಗಿದೆ. ಎಡ ಮತ್ತು ಬಲ ಭಾಗದಲ್ಲಿ ಒಟ್ಟು 60 ಅಡಿಗಳಲ್ಲಿ ರಸ್ತೆ ಅಗಲೀಕರಣ ಮಾಡುವ ಮೂಲಕ ರಸ್ತೆ ನಿರ್ಮಿಸಿ ಸಣ್ಣ ವ್ಯಾಪಾರಸ್ಥರನ್ನು ಮೂಲ ಜಾಗೆಯಲ್ಲಿ ಉಳಿಸಿ ಅವರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ವ್ಯಾಪಾರಸ್ಥರಾದ ಮಂಜುನಾಥಗೌಡ ಪಾಟೀಲ, ವಿರೂಪಾಕ್ಷಪ್ಪ ಹಕ್ಕಂಡಿ, ರಾಜಮ್ಮ, ಬಸವರಾಜ ಕಾತರಕಿ, ನನ್ನುಸಾಬ, ಬಿಸರಳ್ಳಿ ಸಿರಾಜ್, ಸಾದಿಕ್, ಸಲೀಂ ಅಲಿ, ಪ್ರಕಾಶ್, ಸುರೇಶ್ ಕರಡಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.