ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರಕರಣ ದಾಖಲು

7

ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ: ಪ್ರಕರಣ ದಾಖಲು

Published:
Updated:
Deccan Herald

ಗಂಗಾವತಿ: ನಗರಠಾಣೆಗೆ ವರ್ಗಾವಣೆಯಾಗಿ ಬಂದಿರುವ ಇನ್‌ಸ್ಪೆಕ್ಟರ್‌ ಉದಯಯರವಿ ಎಂಬ ಅಧಿಕಾರಿಯನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿಯೊಬ್ಬ ವಿನಾಕಾರಣಕ್ಕೆ ಕರ್ತವ್ಯ ನಿರತ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿದ ಘಟನೆ ನಗರಠಾಣೆಯಲ್ಲಿ ಗುರುವಾರ ನಡೆದಿದೆ.

ಪ್ರಕರಣ ಡಿವೈಎಸ್ಪಿ ಸಂತೋಷ್ ಬನಹಟ್ಟಿ ಅವರ ಗಮನಕ್ಕೆ ಬರುತ್ತಿದ್ದಂತೆಯೆ ಅಧೀನ ಅಧಿಕಾರಿಗೆ ನಿರ್ದೇಶನ ನೀಡಿ ದೂರು ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣ ವಿವರ: ಮೊಹಮ್ಮದ್ ರಫಿ ಅಲಿಯಾಸ್ ಗ್ಯಾಸ್ ರಫಿ ಎಂಬ ವ್ಯಕ್ತಿ ಗುಂಡಮ್ಮಕ್ಯಾಂಪಿನಲ್ಲಿ ಕ್ಲಬ್ ಒಂದನ್ನು ನಡೆಸುತ್ತಿದ್ದ ಎನ್ನಲಾಗಿದೆ. ವಿಚಾರಣೆ ತೆರಳಿದ ಪೊಲೀಸರು ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ವ್ಯಕ್ತಿ ಠಾಣೆಗೆ ಬಂದಿದ್ದಾರೆ.

ಕರ್ತವ್ಯ ನಿರತ ಕಾನ್‌ಸ್ಟೇಬಲ್ ನರಸಪ್ಪ, ನೇರವಾಗಿ ಹಿರಿಯ ಅಧಿಕಾರಿಯ ಭೇಟಿಗೂ ಮುನ್ನ ಪ್ರಾಥಮಿಕ ಮಾಹಿತಿಗಾಗಿ ವಿಚಾರಿಸಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ರಫಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಠಾಣೆಯ ಆವರಣದಲ್ಲಿಯೇ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಆರೋಪಿಯ ವಿರುದ್ಧ ನಗರ ಠಾಣೆಯಲ್ಲಿ ಅತಿಕ್ರಮ ಪ್ರವೇಶ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ, ಕರ್ತವ್ಯ ನಿರತ ಸಿಬ್ಬಂದಿ ಮೇಲೆ ಹಲ್ಲೆ ಮೊದಲಾದ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !