ಉದ್ಯೋಗ ಖಾತ್ರಿ ಮಾಹಿತಿಗೆ ಜಾಗೃತಿ ವಾಹನ

7

ಉದ್ಯೋಗ ಖಾತ್ರಿ ಮಾಹಿತಿಗೆ ಜಾಗೃತಿ ವಾಹನ

Published:
Updated:
Deccan Herald

ಕೊಪ್ಪಳ: ಸಮೀಪದ ಓಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಮೂಡಿಸುವ ರಥಕ್ಕೆ ಚಾಲನೆ ನೀಡಲಾಯಿತು.

ಪಂಚಾಯಿತಿ ಸದಸ್ಯ ರಮೇಶ ದೊಡಮನಿ ಚಾಲನೆ ನೀಡಿ, ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮದಡಿಯಲ್ಲಿ ಗ್ರಾಮದಲ್ಲಿ ವೈಯಕ್ತಿಕ ಮತ್ತು ಸಮುದಾಯಕ ಉದ್ಯೋಗ ಮಾಡಲು ಈ ಯೋಜನೆ ಜಾರಿಗೆ ತರಲಾಗಿದ್ದು, ಜನತೆ ಗುಳೆ ಹೋಗದೆ ಈ ಸೌಲಭ್ಯದ ಮೂಲಕ ಕೂಲಿಯನ್ನು ಪಡೆಯಬಹುದು’ ಎಂದು ಹೇಳಿದರು.

ಪ್ರತಿ ಎರಡನೇ ಗುರುವಾರ ನಡೆಯುವ ರೋಜಗಾರ್ ಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ತಮ್ಮ ಕುಂದುಕೊರತೆಗಳ ಕುರಿತು ಪಂಚಾಯಿತಿ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.

ಸದಸ್ಯರಾದ ರೇವಪ್ಪ ಸಾಲಮನಿ, ಸಿದ್ದಪ್ಪ ವಾಲ್ಮೀಕಿ, ಎಂಐಎಸ್ ಸಂಯೋಜಕ ಮಂಜುನಾಥ ಜವಳಿ, ದೇವರಾಜ ಪತ್ತಾರ, ಸಂತೋಷ ನಂದಾಪುರ, ಪಿಡಿಒ ಆದಯ್ಯಸ್ವಾಮಿ ಹೇರೂರು ಇದ್ದರು. ವಾಹನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !