ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ | ಬಸವನಿಂದ ಬದುಕಿತ್ತು ಈ ಲೋಕ: ಮಾತೆ ಬಸವೇಶ್ವರಿ

ಬಸವ ಜಯಂತಿ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ಇಂದು
Last Updated 3 ಮೇ 2022, 4:54 IST
ಅಕ್ಷರ ಗಾತ್ರ

ಕೊಪ್ಪಳ: ‘12ನೇ ಶತಮಾನ ಸಮಾನತೆಯ ಯುಗ. ಮಹಾತ್ಮ ಬಸವೇಶ್ವರರು ಮಾಡಿದ ಪ್ರಯೋಗದಿಂದ ಇಂದಿಗೂ ದೇಶದಲ್ಲಿ ಸಹಬಾಳ್ವೆ, ಸತ್ಯಶುದ್ಧ ಕಾಯಕ ಪ್ರಜ್ಞೆ ಇದೆ. ಶರಣರು ಹೇಳಿದಂತೆ ಬಸವಣ್ಣನಿಂದಲೇ ಬದುಕಿತ್ತು ಈ ಲೋಕ ಎಂಬ ಮಾತು ಅಕ್ಷರಶಃ ಸತ್ಯ’ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.

ಬಸವ ಜಯಂತಿ ಪ್ರಯುಕ್ತ ಪ್ರವಚನ ಸೇವಾ ಸಮಿತಿ ನೇತೃತ್ವದಲ್ಲಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಶರಣರ ಅನುಭಾವ ದರ್ಶನ’ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಬಸವನೆಂದರೆ ಪಾಪ ದಸೆಗೆಟ್ಟು ಪೋಗುವುದು. ಬಸವನೇ ಜ್ಞಾನ, ದಾನಕ್ಕೆ ಮೂಲ. ಶೋಷಿತರು, ತುಳಿತಕ್ಕೆ ಒಳಗಾದ ಜನರನ್ನು ಸಂಘಟಿಸಿ ನವ ಸಮಾಜವನ್ನು ನಿರ್ಮಾಣ ಮಾಡಿದ ಬಸವಣ್ಣ ಹೊಸ ಮನ್ವಂತರಕ್ಕೆ ಕಾರಣರಾದರು ಎಂದರು.

ಬಸವೇಶ ಕಾರಣೀ ಪುರುಷ, ಜಗ ಬೆಳಗಿದ ಸಿದ್ಧ ಪುರುಷ. ಶರಣರ ವಚನಗಳೇ ಶಾಸನ. ಅವುಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.

ಪ್ರವಚನದ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು. ಶಿವಕುಮಾರ ಕುಕನೂರ, ರಾಜೇಶ ಶಶಿಮಠ ನೇತೃತ್ವ ವಹಿಸಿದ್ದರು.

ಸಮಾರೋಪ: ಮಂಗಳವಾರ ಬಸವ ಜಯಂತಿಯಂದು ಗವಿಮಠದ ಜಾತ್ರಾ ಮೈದಾನದಲ್ಲಿ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.

ಗವಿಮಠ:ಬಸವ ಜಯಂತ್ಯುತ್ಸವ ಸಮಿತಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದಲ್ಲಿ ಷಟಸ್ಥಲ ಧ್ವಜಾರೋಹ, ಪುತ್ಥಳಿಗೆ ಪೂಜೆ,ಬೈಕ್‌ ಜಾಥಾ, ಸಂಜೆ ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದಿಂದ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಗವಿಮಠದ ಆವರಣದಲ್ಲಿ ಬಸವಗೋಷ್ಠಿ ಸಮಾರಂಭದ ಸಾನ್ನಿಧ್ಯವನ್ನು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ವಹಿಸುವರು. ಮಾತೆ ಬಸವೇಶ್ವರಿ, ಅಶೋಕ ಬಸಪ್ಪ ಬರಗುಂಡಿ ಬಸವ ಚಿಂತನೆ ಪ್ರಸ್ತುತ ಪಡಿಸಲಿದ್ದಾರೆ.

ಕಾಯಕ ಜೀವಿ ಶರಣರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ. ಆರ್.ಎಂ. ಪಾಟೀಲ, ಕಸ್ತೂರೆವ್ವ ಡಾ. ಬಸವಯ್ಯ ಸಸಿಮಠ ಮತ್ತು ಬೆಂಗಳೂರಿನ ಅಶೋಕ ದೊಮ್ಮಲೂರು ಇವರು ಈ ಸಲದ ಬಸವ ಕಾರುಣ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕವಿ ಮಹೇಶ ಬಳ್ಳಾರಿಯವರ ‘ನೀನೀಗ ಜಗದ ವಿಳಾಸ’ ಕವನ ಸಂಕಲಬಿಡುಗಡೆ ಯಾಗಲಿದೆ. ಶಕುಂತಲಾ ಬೆನ್ನಾಳ ವಚನ ಸಂಗೀತ ನಡೆಯಲಿದೆ ಎಂದು ಉತ್ಸವಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT