ಗುರುವಾರ , ಏಪ್ರಿಲ್ 15, 2021
31 °C
ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ: ಬೈಕ್‌ ರ‍್ಯಾಲಿ ಮೂಲಕ ಜಾಗೃತಿ

ನುಡಿಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ರವೀಂದ್ರ ಸಜ್ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ‘ಪಟ್ಟಣದಲ್ಲಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಬೈಕ್‌ ರ‍್ಯಾಲಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ಭಾಗವಹಿಸಿ ನುಡಿಜಾತ್ರೆ ಯಶಸ್ವಿಗೊಳಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಸಜ್ಜನ ಹೇಳಿದರು.

ಗುರುವಾರ (ಮಾ.18) ನಡೆಯಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಬುಧವಾರ ನಡೆದ ಬೈಕ್‌ ರ‍್ಯಾಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಾಹಿತ್ಯ, ಸಂಸ್ಕೃತಿಗಾಗಿ ದುಡಿದ ವಿವಿಧ ಕಲಾವಿದರನ್ನು ಗುರುತಿಸುವ ಕಾರ್ಯ ನಡೆದಿದೆ. ನಾಡು–ನುಡಿ ಬಿಂಬಿಸುವ ಇಂಥ ಸಮ್ಮೇಳನಕ್ಕೆ ದುಡಿಯುತ್ತಿರುವ ಪ್ರತಿ ಕನ್ನಡಾಭಿಮಾನಿಯ ಕಾರ್ಯ ಶ್ಲಾಘನೀಯ’ ಎಂದರು.

ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಕನ್ನಡಾಭಿಮಾನಿಗಳು, ಬೈಕ್‍ಗಳಿಗೆ ಕನ್ನಡಧ್ವಜ ಕಟ್ಟಿಕೊಂಡು ಧ್ವನಿವರ್ಧಕದ ಮೂಲಕ ಕನ್ನಡ ಹಾಡುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬ ಹುಸೇನ, ಕಸಾಪ ಗೌರವ ಕಾರ್ಯದರ್ಶಿ ಪರಸಪ್ಪ ಹೊರಪೇಟಿ, ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳ, ಪ್ರಮುಖರಾದ ರಾಜೇಶ ಚಿನ್ನೂರು, ವೀರೇಶ ಮಿಟ್ಲಕೋಡ, ಆನಂದ ಭತ್ತದ, ಶರಣಪ್ಪ ಸಜ್ಜನ, ಮಲಕೇಶ ಕೋಟಿ, ಶ್ರೀಶೈಲ ಪಾಟೀಲ, ವೀರಭದ್ರಪ್ಪ ಗುಗ್ಗಳಶೆಟ್ರ, ನಿಂಗಪ್ಪ ಪೂಜಾರ, ರವಿ ಪಾತ್ರದಾರ, ವಿನೋದ ಮರಾಠಿ, ಶಿವು ಮ್ಯಾಗೇರಿ, ಕನಕರೆಡ್ಡಿ, ಅಮರೇಶ ಪಟ್ಟಣಶೆಟ್ಟಿ, ಶಿವಕುಮಾರ ಸಜ್ಜನ್, ಗಂಗಾಧರ ಗಂಗಾಮತ, ಕೆರಿ, ಕಲ್ಲೇಶ ಅಕ್ಕನವರ್, ವೆಂಕಟೇಶ ಪಾತ್ರದಾರ, ಆನಂದ್ ಭತ್ತದ್, ಅಂಬೋಜಿರಾವ್ ಆರೇರ ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು