ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಸದಸ್ಯತ್ವ ವಿಶ್ವದಲ್ಲೇ ಅಧಿಕ: ದೊಡ್ಡನಗೌಡ ಪಾಟೀಲ

Published : 30 ಆಗಸ್ಟ್ 2024, 16:04 IST
Last Updated : 30 ಆಗಸ್ಟ್ 2024, 16:04 IST
ಫಾಲೋ ಮಾಡಿ
Comments

ಕುಷ್ಟಗಿ: ವಿಶ್ವದಲ್ಲಿ ಬಿಜೆಪಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪಕ್ಷವಾಗಿದೆ ಎಂದು ವಿಧಾನಸಭೆಯಲ್ಲಿನ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.

ಶುಕ್ರವಾರ ಇಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ನಡೆದ ನೋಂದಣಿ ಅಭಿಯಾನಕ್ಕಿಂತಲೂ ಈ ಬಾರಿ ಅತಿ ಹೆಚ್ಚಿನ ಸಾಮಾನ್ಯ ಸದಸ್ಯರನ್ನು ಸೇರ್ಪಡೆಗೊಳಿಸುವ ಜವಾಬ್ದಾರಿ ಹೊತ್ತವರು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಪರಿಣಾಮಕಾರಿಯಾಗಿರುವ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಪರಿಕಲ್ಪನೆಗೆ ಹೆಚ್ಚು ಮಹತ್ವ ದೊರೆತಿರುವ ಕಾರಣಕ್ಕೆ ಕಾಂಗ್ರೆಸ್‌ನವರು ಬಿಜೆಪಿ ಮಾದರಿಯನ್ನು ನಕಲು ಮಾಡುತ್ತಿರುವುದೇ ಸಾಕ್ಷಿಯಾಗಿದೆ. ಸೆ.2 ರಿಂದ ಅಭಿಯಾನ ಆರಂಭಗೊಳ್ಳಲಿದ್ದು, ರಾಜ್ಯದಲ್ಲಿ ಸೆ.4 ರಿಂದ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಸೆ.6 ರಿಂದ ನಡೆಯಲಿದೆ ಎಂದು ವಿವರಿಸಿದರು.

ಅಭಿಯಾನದ ಜಿಲ್ಲಾ ಸಹ ಸಂಚಾಲಕ ಕೆ.ಮಹೇಶ್ ಮಾತನಾಡಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಬದಾಮಿ, ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರು, ವಕೀಲ ಫಕೀರಪ್ಪ ಚಳಗೇರಿ ಇತರರು ಮಾತನಾಡಿದರು. ತಾಲ್ಲೂಕಿನ ಸದಸ್ಯತ್ವ ನೋಂದಣಿ ಅಭಿಯಾನದ ಸಂಚಾಲಕರನ್ನಾಗಿ ಶಿವನಗೌಡ ಪಾಟೀಲ, ಸಹಸಂಚಾಲಕರನ್ನಾಗಿ ವಿಜಯಕುಮಾರ ದೇಸಾಯಿ ಮತ್ತು ಯಮನೂರ ಎಮ್ಮಿ ಅವರನ್ನು ನೇಮಕ ಮಾಡಲಾಯಿತು. ದೇವೇಂದ್ರಪ್ಪ ಬಳೂಟಗಿ ಇತರರು ಇದ್ದರು. ಈರಣ್ಣ ಸೊಬರದ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT