ಭಾನುವಾರ, ಅಕ್ಟೋಬರ್ 24, 2021
23 °C

ರಕ್ತದಾನ; ಆರೋಗ್ಯ ತಪಾಸಣಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಕನಕಗಿರಿ: ಪಂಡಿತ ದೀನದಯಾಳ್ ಅವರ 105ನೇ ಜನ್ಮದಿನಾಚರಣೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 71ನೆ ಜನ್ಮ ದಿನಾಚರಣೆ ನಿಮಿತ್ತ ಇಲ್ಲಿನ ಎಪಿಎಂಸಿ ಶ್ರಮಿಕರ ಭವನದಲ್ಲಿ ‘ಸೇವೆ ಮತ್ತು ಸಮರ್ಪಣೆ ಅಭಿಯಾನ‘ ಹಾಗೂ ‘ಪ್ರತಿಜ್ಞಾವಿಧಿ ಕಾರ್ಯಾಗಾರ‘ ನಡೆಯಿತು.

ಭಾರತೀಯ ಬಹು ಪರಿವಾರದ ರಾಜ್ಯ ಕಾರ್ಯದರ್ಶಿ ನೀಲಕಂಠಪ್ಪ ನಾಗಶೆಟ್ಟಿ ಅವರು ಪಂಡಿತ ದೀನದಯಾಳ್ ಅವರ ಜೀವನ ಚರಿತ್ರೆ ಮತ್ತು ಪಕ್ಷ ಸಂಘಟನೆ ಕುರಿತು ಮಾತನಾಡಿದರು.

ಇದೇ ಸಮಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಿತು. 

ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ನೇಮ್ ಪ್ಲೇಟ್ ಅಳವಡಿಸಲಾಯಿತು.

ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಪ್ರಧಾನ ಕಾರ್ಯದರ್ಶಿ ವಾಗೀಶ ಹಿರೇಮಠ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಶಿವಾರೆಡ್ಡಿ ಆದಾಪುರ, ಹನುಮಂತ ಬಸರಿಗಿಡದ, ಶರತ್ ಚಂದ್ರ ನಾಯಕ, ರಂಗಪ್ಪ ಕೊರಗಟಗಿ, ಚೇತನಕುಮಾರ ಶ್ರೇಷ್ಠಿ, ತಿಪ್ಪಣ್ಣ ಮಡಿವಾಳ, ಅಶ್ವಿನಿ ದೇಸಾಯಿ, ಟಿ.ಜೆ.ರಾಜಶೇಖರ, ಮಲ್ಲಿಕಾರ್ಜುನ ಬಳಗಾನೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.