ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿಗೆ ನಿರಂತರ ಪರಿಶ್ರಮ ಅಗತ್ಯ: ಡಾ.ಬಿ.ಕೆ.ಎಸ್‌.ವರ್ಧನ್‌

Last Updated 21 ಜುಲೈ 2021, 4:21 IST
ಅಕ್ಷರ ಗಾತ್ರ

ಕೊಪ್ಪಳ: ‘ಸಾಧನೆಗೆ ನಿರಂತರ ಪರಿಶ್ರಮ ಅಗತ್ಯ’ ಎಂದು ಶಿಕ್ಷಣ ಇಲಾಖೆಯ ವಿಭಾಗೀಯ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಭಾಗ್ಯನಗರದ ಪಯೋನಿಯರ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರಸಿನಕೇರೆ ಶಾಲೆಮುಖ್ಯಶಿಕ್ಷಕ ಸುಧೀಂದ್ರ ದೇಸಾಯಿ ಅವರ ‘ಇಂಗ್ಲಿಷ್ ಗ್ರಾಮರ್’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದ ಸಾಧಕರ ಪಟ್ಟಿ ನೋಡಿದಾಗ ಅದರಲ್ಲಿ ಅತಿ ಹೆಚ್ಚು ಶಿಕ್ಷಕರಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಸುಧೀಂದ್ರ ದೇಸಾಯಿ ಅವರು ಇಂಗ್ಲಿಷ್‌ ವಿಷಯದಲ್ಲಿ ತಮಗೆ ಆದ ಅವಮಾನ ಮಕ್ಕಳಿಗೆ ಆಗಬಾರದು ಎಂದು ಕಠಿಣ ಪರಿಶ್ರಮದಿಂದಇಂಗ್ಲಿಷ್ ಕಲಿತು ಪುಸ್ತಕ ರಚನೆ ಮಾಡಿರುವುದು ಹೆಮ್ಮೆಯ ವಿಷಯ ಎಂದರು. ಉಪನ್ಯಾಸಕಸಿದ್ಧಲಿಂಗಪ್ಪ ಕೊಟ್ನೆಕಲ್ ಮಾತನಾಡಿ,‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂಗ್ಲಿಷ್‌ ಭಾಷೆ ಕಲಿಕೆಯಲ್ಲಿ ಮಕ್ಕಳು ಹಿಂದೆ ಬಿದ್ದಿದ್ದಾರೆ. ಭಯ, ಹಿಂಜರಿಕೆ ಹಿಂದುಳಿಯುವಿಕೆಗೆ ಕಾರಣವಾಗಿದೆ’ ಎಂದು ಅವರು ಹೇಳಿದರು.

ಲೇಖಕ ಸುಧೀಂದ್ರ ದೇಸಾಯಿ, ದತ್ತಾತ್ರೇಯ ಸಾಗರ ಹಾಗೂ ಸುಮಿತ್ರಾ ಪ್ಯಾಟಿ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಾ ಇಟ್ಟಂಗಿ ಅಧ್ಯಕ್ಷತೆ ವಹಿಸಿದ್ದರು.

ಅಂಗವಿಕಲ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೀರಪ್ಪ ಅಂಡಗಿ,ಜಿಲ್ಲಾ ಸಾಂಖಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ವೀರಬಸಪ್ಪ ಪಟ್ಟಣಶೆಟ್ಟಿ, ಶ್ರೀಶೈಲಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವನಗೌಡ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ, ಬಾಳಪ್ಪ ಕಾಳೆ, ಆನಂದ ಗೊಂಡಬಾಳ, ಮಾರ್ಥಂಡರಾವ ದೇಸಾಯಿ, ಪ್ರಕಾಶಬಾಬು, ಗುರುರಾಜ ದೇಸಾಯಿ, ವೆಂಕಟೇಶ ಜೋಷಿ ಹಾಗೂ ರಾಘವೇಂದ್ರ ಕುಲಕರ್ಣಿ ಸೇರಿ ಹಲವರು ಇದ್ದರು.

ಅರವಿಂದ ಪಾಟೀಲ, ಸಂಪದಾ ದೇಸಾಯಿ ನಿರೂಪಿಸಿದರು. ಅಶೋಕ ಕುಲಕರ್ಣಿ ಸ್ವಾಗತಿಸಿದರು. ಜಯಶ್ರೀ ದೇಸಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT