ಭಾನುವಾರ, ಮೇ 29, 2022
21 °C

ಕೊಪ್ಪಳ: ‘ಆರೋಗ್ಯದಲ್ಲಿ ಆಯುರ್ವೇದ ಸಂಪತ್ತು’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಆಯುರ್ವೇದದ ಕುರಿತು ಸನಾತನ ಋಷಿಮುನಿಗಳಿಂದ ಹಿಡಿದು ಆಧುನಿಕ ವೈದ್ಯ ವಿಜ್ಞಾನದವರೆಗೆ ಅನೇಕ ಸಂಶೋಧನೆಗಳು ನಡೆದಿವೆ’ ಎಂದು ಡಾ.ಕುಮಾರಸ್ವಾಮಿ ಹಿರೇಮಠ ಹೇಳಿದರು.

ನಗರದ ಗವಿಮಠದಲ್ಲಿ ನಡೆದ ‘ಆರೋಗ್ಯದಲ್ಲಿ ಆಯುರ್ವೇದ ಸಂಪತ್ತು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಪುಸ್ತಕ ರಚಿಸಲು ಪಾರಂಪರಿಕ ಜ್ಞಾನ, ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ ವೃತ್ತಿಯಿಂದ ಪಡೆದ ಅನುಭವ ನೆರವಿ‌ಗೆ ಬಂದಿದೆ’ ಎಂದರು.

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡಿದರು.

ಉದ್ಯಮಿ ಎಸ್.ಆರ್.ನವಲಿ ಹಿರೇಮಠ, ರಮೇಶ ವೈದ್ಯ, ವಿ.ಎಂ.ಭೂಸನೂರಮಠ, ಆಯುರ್ವೇದ ವಿಭಾಗದ ಆರ್.ಜಿ.ಯು.ಎಚ್.ಎಸ್ ಬೆಂಗಳೂರಿನ ಡೀನ್‍ರಾದ ಡಾ.ಶ್ರೀನಿವಾಸ ಬನ್ನಿಗೋಳ, ಡಾ.ಮಹಾಂತೇಶ ಮಲ್ಲನಗೌಡರ, ಡಾ.ಕೆ.ಬಿ.ಬ್ಯಾಳಿ, ಹನುಮಂತಪ್ಪ ಅಂಡಗಿ ಹಾಗೂ ಮುಂತಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು