ಕಾರಟಗಿ: ಕಾರ್ಮಿಕ ದಿನಾಚರಣೆ ನಿಮಿತ್ತ ತಾಲ್ಲೂಕಿನ ಬೂದಗುಂಪಾ ಗ್ರಾ.ಪಂ ಕಾರ್ಮಿಕರಾದ ನಿರುಪಾದಿ ಭರಮಪ್ಪ, ನಾಗೇಂದ್ರಪ್ಪ ದುರ್ಗಪ್ಪ, ಶರಣಮ್ಮ ವೀರೇಶಗೆ ಕರ್ನಾಟಕ ರೈತ ಜನ ಸಂಘದ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.

ಕರ್ನಾಟಕ ರೈತ ಜನ ಸಂಘದ ರಾಜ್ಯಾಧ್ಯಕ್ಷ ವೀರನಗೌಡ ಮಾಲಿ ಪಾಟೀಲ ಮಾತನಾಡಿ, ‘ಲಾಕ್ಡೌನ್ ಸಂದರ್ಭದಲ್ಲಿ ಗ್ರಾಪಂ ಕಾರ್ಮಿಕರು ಜೀವದ ಭಯ ತೊರೆದು ಕೆಲಸ ಮಾಡಿದರು. ಕಾರ್ಖಾನೆ, ಕೃಷಿ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ಕಾರ್ಮಿಕರೂ ದಿನನಿತ್ಯ ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ರಕ್ಷಿಸಿದರು. ಆದ್ದರಿಂದ ಅವರಿಗೆ ಪ್ರೋತ್ಸಾಹಕರ ಕಾರ್ಯಗಳನ್ನು ಮಾಡಬೇಕು’ ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಮಾತನಾಡಿ, ‘ಕಾರ್ಮಿಕರ ಬಗ್ಗೆ ಸದಾ ಒಲವು ತೋರಿದ ಕಾರ್ಲ್ಮಾರ್ಕ್ಸ್ ಹುಟ್ಟಿದ ದಿನವಾದ ಮೇ 1ರಂದು ಕಾರ್ಮಿಕ ದಿನ ಆಚರಿಸುತ್ತಾರೆ. ಪ್ರತಿಯೊಂದು ರಂಗದಲ್ಲಿ ದುಡಿಯುವ ಕಾರ್ಮಿಕರು ಕಷ್ಟ ಜೀವಿಗಳು’ಎಂದರು.

ಪಂಚಾಯಿತಿ ಸಿಬ್ಬಂದಿ, ಕರವಸೂಲಿಗಾರರಾದ ರಾಮಣ್ಣ ಭಜಂತ್ರಿ, ಬಸನಗೌಡ, ಬಸವರಾಜ, ಪೂಜಾ ಶಿವಕುಮಾರ್, ಮದರ್ ಬಿ. ಸಲೀಂಸಾಬ, ಮೈಬುಪಾಷಾ, ಮುಖಂಡರಾದ ಷಣ್ಮುಖಪ್ಪ ನಾಲ್ಕೆತ್ತೀನ್, ರಾಮಣ್ಣ, ವೀರಭದ್ರಪ್ಪ ಕುಂತನೂರ್, ಬಸವರಾಜ ಜುಟ್ಲದ, ಪಂಪಾಪತಿ ಗುಡಿದಿನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-35-2082607188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.