ಕನಕಗಿರಿ: ಸಮೀಪದ ಉಮಳಿ ಕಾಟಾಪುರ ಗ್ರಾಮದ ರೈತ ಹನುಮಂತ ಈಳಿಗೇರ ಅವರಿಗೆ ಸೇರಿದ ಎತ್ತೊಂದು ಸೋಮವಾರ ಮಧ್ಯಾಹ್ನ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.
ಗ್ರಾಮದಲ್ಲಿ ಮಳೆ ಬೀಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗುಡುಗು, ಸಿಡಿಲಿನ ಅಬ್ಬರ ಜಾಸ್ತಿಯಾಗಿತ್ತು. ಹೊಲದಲ್ಲಿ ಮೇಯುತ್ತಿರುವಾಗ ಸಿಡಿಲು ಬಡಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ರೈತ ಸಂಘದ ಅಧ್ಯಕ್ಷ ಭೀಮನಗೌಡ ತಿಳಿಸಿದ್ದಾರೆ.