ಚಾಲಕನ ನಿಯಂತ್ರಣ ತಪ್ಪಿ: ಬಸ್ ಮರಕ್ಕೆ ಡಿಕ್ಕಿ

7

ಚಾಲಕನ ನಿಯಂತ್ರಣ ತಪ್ಪಿ: ಬಸ್ ಮರಕ್ಕೆ ಡಿಕ್ಕಿ

Published:
Updated:
Deccan Herald

ಕೊಪ್ಪಳ: ನಗರದ ಜಿಲ್ಲಾ ಅಗ್ನಿಶಾಮಕ ಠಾಣೆ ಬಳಿಯ ಹೊಸಪೇಟೆ ರಸ್ತೆಯಲ್ಲಿ ಭಾನುವಾರ ವೇಗವಾಗಿ ಚಲಾಯಿಸುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐದು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಸಿದ್ದೇಶ ಹನುಮಪ್ಪ, ಮಲ್ಲೇಶ ಶಿವಪ್ಪ, ರಮೇಶ ಹಿರೇಬಗನಾಳ, ಮಾಲಾ ಮೈಸೂರು, ಮಹಾಲಕ್ಷ್ಮಿ ಮೈಸೂರು ಎನ್ನುವವರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಬಸ್‌ನಲ್ಲಿ ಒಟ್ಟು 40 ಜನರು ಪ್ರಯಾಣಿಸುತ್ತಿದ್ದರು. ಉಳಿದ  ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !