ಭಾನುವಾರ, ಡಿಸೆಂಬರ್ 8, 2019
25 °C

ಸಂಚಾರಿ ಸಿಬಿ-ನಾಟ್ ವಾಹನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಸಿಬಿ-ನಾಟ್ ವಾಹನದ ಮೂಲಕ ಕ್ಷಯರೋಗವನ್ನು ಬಹುಬೇಗ ಪತ್ತೆ ಹಚ್ಚಬಹುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಮಂಗಳವಾರ ಕ್ಷಯ ರೋಗ ಪತ್ತೆ ಆಂದೋಲನ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸಂಚಾರಿ ಸಿಬಿ-ನಾಟ್ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಷಯ ರೋಗ ಪತ್ತೆಹಚ್ಚಲು ಈ ವಾಹನ ಸಹಕಾರಿಯಾಗಿದ್ದು, ಇದರ ಸದುಪಯೋಗವನ್ನು ತಾಲ್ಲೂಕಿನ ನಾಗರಿಕರು ಪಡೆದುಕೊಳ್ಳಬೇಕು ಎಂದರು.

ಇಂದಿನಿಂದ ಹತ್ತು ದಿನಗಳ ಕಾಲ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಈ ವಾಹನ ಸಂಚಾರ ನಡೆಸಲಿದೆ. ಈಗಾಗಲೇ ಆರೋಗ್ಯ ಕಾರ್ಯಕರ್ತರು ಸಂಭವನೀಯತೆಯ ರೋಗಿಗಳನ್ನು ಗುರುತಿಸಿದ್ದು, ಅಂಥವರ ಕಫ ಪರೀಕ್ಷೆಯನ್ನು ಮಾಡಲಾಗುವುದು. ಎರಡು ವಾರಗಳ ಕಾಲ ಮೇಲ್ಪಟ್ಟು ಕೆಮ್ಮು ಇರುವವರು ಹಾಗೂ ಸಾಯಂಕಾಲ ಜ್ವರ ಬರುವವರು ದೇಹದ ತೂಕ ಕಡಿಮೆಯಾದವರು ಸಂಚಾರಿ ವಾಹನದ ಹತ್ತಿರ ಬಂದು ಮುಜುಗರ ಪಡದೆ ಕಫ ಪರೀಕ್ಷೆಗೆ ಒಳ ಪಡಬೇಕು ಎಂದು ಸಲಹೆ ನೀಡಿದರು.

ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ, ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ ಚಕೋತಿ, ಆಸ್ಪತ್ರೆಯ ವೈದ್ಯರಾದ ಶರಣಪ್ಪ, ಸತೀಶ್, ಕ್ಷಯರೋಗ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ನಾಗರಾಜ, ಅಶೋಕ್ ಕುಮಾರ್, ಆಶಾ ಬೇಗo, ವಿಜಯಪ್ರಸಾದ್, ದೇವೇಂದ್ರಗೌಡ, ಶಿವಾನಂದ್, ರಾಜೀವ್, ಪ್ರಮುಖರಾದ ಯಂಕಪ್ಪ ಕಟ್ಟಿಮನಿ, ಡಿ.ಕೆ.ಆಗೋಲಿ, ರಾಘವೇಂದ್ರ ಶೆಟ್ಟಿ, ಚಂದ್ರಶೇಖರ್ ಇದ್ದರು.

ಪ್ರತಿಕ್ರಿಯಿಸಿ (+)