ಗುರುವಾರ , ನವೆಂಬರ್ 14, 2019
19 °C

ಚೆಕ್‌ ಡ್ಯಾಂ ಭರ್ತಿ; ರೈತರಲ್ಲಿ ಹರ್ಷ

Published:
Updated:
Prajavani

ತಾವರಗೇರಾ: ಸತತ ಐದು ವರ್ಷಗಳಿಂದ ಉಂಟಾಗಿದ್ದ ಬರಗಾಲಕ್ಕೆ ತತ್ತರಿಸಿದ್ದ ಮುದೇನೂರು ಹೋಬಳಿ ವ್ಯಾಪ್ತಿಯ ವಿವಿಧೆಡೆ ಉತ್ತಮ ಮಳೆಯಾಗಿದೆ.

ಕಳೆದ 25 ದಿನಗಳಿಂದ ಸುರಿದ ಮಳೆಗೆ ಚೆಕ್ ಡ್ಯಾಂ, ಕೆರೆಗಳು, ಹಳ್ಳ ಹಾಗೂ ನಾಲೆಗಳು ತುಂಬಿ ಹರಿಯುತ್ತಿವೆ. ಇದು ರೈತರ ಮುಖದಲ್ಲಿ ಸಂತಸ ಮೂಡಿಸಿದೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಚೆಕ್ ಡ್ಯಾಂ, ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಆದರೆ, ಮಳೆ ಬಾರದ ಕಾರಣ ಅವು ತುಂಬಿರಲಿಲ್ಲ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕೃಷಿ ಭಾಗ್ಯ ಯೋಜನೆ ಅಡಿ ಚೆಕ್ ಡ್ಯಾಂ, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿತ್ತು.

ಹೋಬಳಿ ವ್ಯಾಪ್ತಿಯ ಕೆ.ಬೆಂಚಮಟ್ಟಿ, ಮುದ್ದಲಗುಂದಿ ಹಾಗೂ ಜುಮಲಾಪೂರ, ಕಿಲಾರಹಟ್ಟಿ, ಶಿರಗುಂಪಿ, ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಉತ್ತಮ ಮಳೆ ಆಗಿದೆ.

ಮುದೇನೂರು ಮುಖ್ಯರಸ್ತೆ ಪಕ್ಕದ ಕೆ.ಬೆಂಚಮಟ್ಟಿ, ಬನ್ನಟ್ಟಿ ನಾಲೆಗಳಿಗೆ ನಿರ್ಮಿಸಿದ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ.

ಅಂತರ್ಜಲ ವೃದ್ಧಿ: ಅಂತರ್ಜಲ ಮರುಪೂರಣ ಘಟಕಕ್ಕೆ ಹಣ ವ್ಯಯಿಸುವುದಕ್ಕಿಂತ ಚೆಕ್ ಡ್ಯಾಂ, ಹಳ್ಳ, ಕೆರೆಗಳಲ್ಲಿ ನೀರು ಸಂಗ್ರಹ ಮಾಡಿದರೆ ಅಂತರ್ಜಲ ತಾನಾಗಿಯೇ ವೃದ್ಧಿಯಾಗುತ್ತದೆ ಎನ್ನುತ್ತಾರೆ ರೈತ ಹನುಮಂತ ಬೆಂಚಮಟ್ಟಿ.

ಪ್ರತಿಕ್ರಿಯಿಸಿ (+)