ಭಾನುವಾರ, ಜನವರಿ 26, 2020
31 °C

ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಜಾಹೃತಿ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮಕ್ಕಳ ಕಳ್ಳ ಸಾಗಾಣಿಕೆ ತಡೆಯುವ ಬಗ್ಗೆ ಹೆಚ್ಚು ಜನಪ್ರಿಯಗೊಳಿಸುವುದು ಹಾಗೂ ಸಾರ್ವಜನಿಕರಿಗೆ ಈ ಒಂದು ವಿಷಯದ ಕುರಿತಾಗಿ ತೀವ್ರವಾಗಿ ಜಾಗೃತಿ ಮೂಡಿಸುವುದು ಪ್ರಧಾನ ಕೆಲಸ ಆಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಟಿ.ಶ್ರೀನಿವಾಸ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಈಚೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಬೆಳಗಾವಿ ಸ್ಪಂದನ ಸಂಸ್ಥೆ, ನವದೆಹಲಿ ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಆಶ್ರಯದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಯಿಂದ ಮಕ್ಕಳ ರಕ್ಷಣೆ ಕುರಿತು ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಕಳ್ಳ ಸಾಗಾಣಿಕೆ ಪ್ರಕ್ರಿಯೆಗೆ ತೊಡಗಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಕಳ್ಳ ಸಾಗಾಣಿಕೆ ಮಾಡುವವರಿಗೆ ಕಾಯ್ದೆಯ ಪ್ರಕಾರ 2 ವರ್ಷ ಜೈಲು ₹ 1 ಲಕ್ಷ ದಂಡ ವಿಧಿಸಲಾಗುತ್ತದೆ. ಮಾನವ ಕಳ್ಳ ಸಾಗಾಣಿಕೆ ಒಂದು ದೊಡ್ಡ ಜಾಲನೆ ಇದೆ. ಮಾನವನ ಮೇಲೆ ಆಗುವಂತಹ ಎಲ್ಲ ಕ್ಷೇತ್ರದಲ್ಲಿ ಆಗುವ ಶೋಷಣೆಯನ್ನು ನಿಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಆಗಮಿಸಬೇಕು. ಸಾರ್ವಜನಿಕರು ಹಾಗೂ ಮಕ್ಕಳ ಸಂವಾದಲ್ಲಿ ಉತ್ತರ ಜಿಲ್ಲಾಡಳಿತ ನೀಡಬೇಕು ಎಂದು ವಿಷಾದ ವ್ಯಕ್ತಪಡಿಸಿದರು.

ಯುನಿಸೆಫ್ ಯೋಜನಾಧಿಕಾರಿ ಹರೀಶ್ ಜೋಗಿ ಮಾತನಾಡಿ, ಗುಳೆ, ವಲಸೆ, ಬಾಲ್ಯ ವಿವಾಹ, ಬಿಕ್ಷಾಟನೆ ನೆಪದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗ್ರಾಮ ಪಂಚಾಯಿತಿ ಮಟ್ಟದ ಮಹಿಳೆಯರ ಮತ್ತು ಮಕ್ಕಳ ಮಾರಾಟ ತಡೆ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲೆಯಿಂದ ₹ 13,000 ಕುಟುಂಬಗಳು ದುಡಿಯಲಿಕ್ಕೆ ವಲಸೆ ಹೋಗುತ್ತಾರೆ. ಹಿಗೇಲ್ಲಾ ಹೋದವರು ವಾಪಸ್ ಬರುವರು ಎಂಬುವುದು ದೊಡ್ಡ ಸಮಸ್ಯೆಯಾಗಿದೆ. ಹಿಂಸೆ, ಶೋಷಣೆ, ಪ್ರಾಣ ಕಳೆದುಕೊಳ್ಳುವುದು ವಲಸೆ ಹೋಗುವುದರಲ್ಲಿ ನಡೆಯುತ್ತದೆ. ಇದು ಕಾನೂನು ಬದ್ಧವಾಗಿರಬೇಕು. ವಲಸಿಗರಿಗೆ ರಕ್ಷಣೆ ಸಿಗಬೇಕು ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್ ಅಧ್ಯಕ್ಷತೆ ವಹಿಸಿದ್ದರು.

ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಾಗರಾಜ ದೇಸಾಯಿ, ಬೆಳಗಾವಿ ಸ್ಪಂದನ ಸಂಸ್ಥೆ ಸುಶೀಲ, ಮಕ್ಕಳ ಕಾನೂನು ಸಲಹೆಗಾರ ರಾಘವೇಂದ್ರ ಭಟ್, ಬಾಲ ನ್ಯಾಯ ಮಂಡಳಿ ಸದಸ್ಯ ಶೇಖರಗೌಡ ರಾಮತ್ನಾಳ, ಸಿ.ಪಿ.ಐ ಮಹಾಂತೇಶ ಸಜ್ಜನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಸರೋಜಾ ಬಾಕಳೆ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು