ಕನಕಗಿರಿ: ‘ಮಕ್ಕಳ(14 ವರ್ಷದೊಳಗಿನವರ) ದುಡಿಮೆಯಲ್ಲಿ ಕುಟುಂಬದ ಜೀವನ ನಿರ್ವಹಣೆ ಆಗಬಾರದು’ ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.

ಸಮೀಪದ ಚಿಕ್ಕ ಮಾದಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾ.ಪಂ ಹಾಗೂ ಕೂಡಲ ಸಂಗಮೇಶ್ವರ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಬದುಕುವ ಹಕ್ಕುಗಳಿವೆ. ಜಾತಿ ಧರ್ಮಕ್ಕಿಂತ ದೇಶ ದೊಡ್ಡದು ಎಂಬ ಪ್ರಜ್ಞೆಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬಬೇಕು. ಆಗಷ್ಟೇ ಮಕ್ಕಳು ಉತ್ತಮ ಪ್ರಜೆಗಳು ಆಗಲು ಸಾಧ್ಯ. ಓದುವ ವಯಸ್ಸಿನಲ್ಲಿ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಬಾರದು. ಕುಟುಂಬ ನಿರ್ವಹಣೆ ಮಕ್ಕಳ ದುಡಿಮೆಯಿಂದ ನಡೆಯಬಾರದು’ ಎಂದು ತಿಳಿಸಿದರು.

ಪಿಡಿಒ ಬಸವರಾಜ ಸಂಕನಾಳ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯ ಮನೆಮನೆ ಮೂಲಕ ಆರಂಭವಾಗಬೇಕು. ಇಲ್ಲವೆಂದರೆ ಭವಿಷ್ಯಕ್ಕೆ ಹಾನಿಯಾಗುತ್ತದೆ’ ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷೆ ಹನುಮವ್ವ ವಡ್ಡರಕಲ್ಲ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ಬೀರಪ್ಪ, ನಾಗಪ್ಪ, ಹುಲಿಗೆಮ್ಮ, ಎಎಸ್ಐ ಕೃಷ್ಣ, ಮುಖ್ಯಶಿಕ್ಷಕರಾದ ಶಂಕ್ರಪ್ಪ, ಜಗದೀಶ ಟಿ.ಎಸ್. ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.