ಶನಿವಾರ, ಡಿಸೆಂಬರ್ 14, 2019
21 °C

ಕುಮ್ಮಠದುರ್ಗ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಪರಿಸರ, ಪರಂಪರೆ, ಪ್ರಕೃತಿಯನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದು ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್‌ ಹೇಳಿದರು.

ತಾಲ್ಲೂಕಿನ ಕುಮ್ಮಠ ದುರ್ಗಾದಲ್ಲಿ ಮಂಗಳವಾರ ಆರೋಗ್ಯ ಇಲಾಖೆ, ಚಾರಣ ಬಳಗ, ಪೊಲೀಸ್‌ ಇಲಾಖೆ, 150 ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ಮೆಗಾ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಐತಿಹಾಸಿಕ ಸ್ಥಳಗಳನ್ನು ಗುರುತಿ ಸುವುದು, ಅವುಗಳನ್ನು ಸಂರಕ್ಷಣೆ ಮಾಡುವುದು, ಅದರ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಇದೇ ವೇಳೆ ಕುಮ್ಮಠ ದುರ್ಗಾದಲ್ಲಿನ ಜೈನ ಬಸದಿ, ಕೋಟೆಯನ್ನು ಸ್ವಚ್ಛಗೊಳಿ ಸಲಾಯಿತು. ಪುರಾತನ ಕಾಲದ ಜೈನ ಮಂದಿರದ ಸುತ್ತಲೂ ಮುಳ್ಳು ಬೆಳೆದು ಮಂದಿರ ಸಂಪೂರ್ಣ ಮುಚ್ಚಿಹೋಗಿತ್ತು. ವಿದ್ಯಾರ್ಥಿಗಳ ಸ್ವಚ್ಛತಾ ಕಾರ್ಯದಿಂದ ಜೈನ ಮಂದಿರ ಇದೀಗ ಸಂಪೂರ್ಣ ಸ್ವಚ್ಛಗೊಂಡಿದ್ದು, ವಿದ್ಯಾರ್ಥಿಗಳ ಕೆಲಸವನ್ನು ಗಣ್ಯರು ಶ್ಲಾಘಿಸಿದರು.

ಈ ವೇಳೆ ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ, ತಾಲ್ಲೂಕು ಪಂಚಾ ಯಿತಿ ಇಒ‌ ಡಿ.ಮೋಹನ್, ಆರೋಗ್ಯಾ ಧಿಕಾರಿ ಡಾ.ಈಶ್ವರ ಸವಡಿ, ಎನ್‌ಎಸ್‌ಎಸ್‌ ಉಸ್ತುವಾರಿ ಬಸಪ್ಪ ನಾಗೋಲಿ, ಸೋಮಶೇಖರ ಗೌಡ, ರಮೇಶ ಗಬ್ಬೂರ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು