ಮಂಗಳವಾರ, ಜೂನ್ 15, 2021
26 °C

ಗೆದಗೇರಿ ತಾಂಡಾ: ಕೋವಿಡ್ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೆದಗೇರಿ ತಾಂಡಾ (ಯಲಬುರ್ಗಾ): ತಾಲ್ಲೂಕಿನ ಗೆದಗೇರಿ ತಾಂಡಾದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರಭದ್ರಪ್ಪ ಮೂಲಿಮನಿ ಮಾತನಾಡಿ,‘ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸ್ವಚ್ಛತೆ ಕಾಯ್ದುಕೊಳ್ಳವುದು ಅವಶ್ಯ. ಅಗತ್ಯ ವಸ್ತುಗಳ ಖರೀದಿ ಜನ ಮುಗಿ ಬೀಳಬಾರದು’ ಎಂದು ಅವರು ಹೇಳಿದರು.

ಅಧ್ಯಕ್ಷೆ ನಿಂಗವ್ವ ಕಲ್ಲೂರು ಹಾಗೂ ಉಪಾಧ್ಯಕ್ಷ ಶರಣಪ್ಪ ಕೊಪ್ಪದ ಮಾತನಾಡಿ,‘ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ದೊಡ್ಡದಿದೆ. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅರೋಗ್ಯ ಇಲಾಖೆಯ ಶ್ರೀದೇವಿ ತೋಟದ, ವಿದ್ಯಾ ಕುಡಗುಂಟಿ, ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಕುದರಿ, ಆಶಾ ಕಾರ್ಯಕರ್ತೆ ಭಾಗ್ಯಶ್ರೀ ಗೊಲ್ಲರ, ಜಯಶ್ರೀ ಕುರ್ನಾಳ, ತಾಂಡದ ಸದಸ್ಯ ತಿರುಪತಿ ಬಸರಗಿಡ, ನಾಗರಾಜ ರಾಠೋಡ ಹಾಗೂ ಕಳಕಯ್ಯ ಹಿರೇಮಠ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.