ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಾರಿಯರ್ಸ್‌ಗೆ ಸನ್ಮಾನ

ತುಂತುರು ಮಳೆಯ ನಡುವೆಯೇ ಧ್ವಜಾರೋಹಣ ಸಂಭ್ರಮ
Last Updated 18 ಸೆಪ್ಟೆಂಬರ್ 2020, 6:27 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಸರಳವಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.

ಜಿಟಿ ಜಿಟಿ ಮಳೆ ಹನಿಯಲ್ಲಿಯೇ ತಹಶೀಲ್ದಾರ್ ರವಿ ಅಂಗಡಿ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ರವಿ ಅಂಗಡಿ ಅವರು, ಕಲ್ಯಾಣ ಕರ್ನಾಟಕ ಉತ್ಸವದ ಬಗ್ಗೆ ತಿಳಿಸಿದರು.

ಕೊರೊನಾ ವಾರಿಯರ್ಸ್‌ಗಳಾದ ಸಮುದಾಯ ಆರೋಗ್ಯ ಕೇಂದ್ರದ ತಾಲ್ಲೂಕು ಆರೋಗ್ಯ ಅಧಿಕಾರಿ ರಾಘವೇಂದ್ರ, ವೈದ್ಯರಾದ ಸೌಮ್ಯ, ಶ್ವೇತಾ ಸಿಬ್ಬಂದಿ ಸುಶೀಲದೇವಿ, ಅಮೀನಸಾಬ, ಪಂಪನಗೌಡ, ಸ್ವಯಂ ಸೇವಕ ಮಂಜುನಾಥ ಪದಕಿ, ಆಶಾ ಕಾರ್ಯಕರ್ತರಾದ ಸುಕನ್ಯಾ, ಮಂಜುಳಾ ಗುರಿಕಾರ ಇತರರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಸದಸ್ಯರಾದ ಮಹ್ಮದಪಾಷ ಮುಲ್ಲಾರ, ಸುಭಾಸ ಕಂದಕೂರ, ರವಿ ಭಜಂತ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಭೀಮಮ್ಮ ಬುನ್ನಟ್ಟಿ, ಬಸಂತಗೌಡ, ಮಲ್ಲಿಕಾರ್ಜುನಗೌಡ, ಉಪ ತಹಶೀಲ್ದಾರ್ ರಾದ ವಿಶ್ವೇಶ್ವರಯ್ಯ ಸಾಲಿಮಠ, ಶಿವಕುಮಾರ ಉಪನ್ಯಾಸಕ ಮಾರೆಪ್ಪ ಇದ್ದರು.

17 ಜನ ಪಟ್ಟಣ ಪಂಚಾಯಿತಿ ಸದಸ್ಯರ ಪೈಕಿ 14 ಜನ ಸದಸ್ಯರು ಹಾಗೂ ಮುಖ್ಯಾಧಿಕಾರಿ ತಿರುಮಲಮ್ಮ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ವಿವಿಧೆಡೆ ಉತ್ಸವ

ಕನಕಗಿರಿ: ಪಟ್ಟಣದ ವಿವಿಧ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲಾಯಿತು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತಹಶೀಲ್ದಾರ್ ರವಿ ಅಂಗಡಿ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ತಿರುಮಲಮ್ಮ, ಸದಸ್ಯರಾದ ರವೀಂದ್ರ ಸಜ್ಜನ್, ಆಫೀಜಬೇಗ್ಂ, ಸುಭಾಸ ಕಂದಕೂರ, ಪಾಷ ಮುಲ್ಲಾರ, ರವಿ ಭಜಂತ್ರಿ, ತಿಪ್ಪಣ್ಣ ನಾಯಕ ಇತರರು ಇದ್ದರು.

ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿಶ್ರೀನಿವಾಸ ಧ್ವಜಾರೋಹಣ ನೆರವೇರಿಸಿದರು. ಶೇಖರಗೌಡ ಪಾಟೀಲ, ಕೆ. ಗಂಗಾಧರಸ್ವಾಮಿಇದ್ದರು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಎಸ್ ಸಿ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ, ಕನಕರೆಡ್ಡಿ, ವಾಗೀಶ ಹಿರೇಮಠ, ಅಶ್ವಿನಿ ದೇಸಾಯಿ, ಹನುಮಂತಪ್ಪ ಬಸರಿಗಿಡದ ಇದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಮಾರೆಪ್ಪ ಧ್ವಜಾರೋಹಣ ನೆರವೇರಿಸಿದರು. ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ ಹಾಗೂ ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT