ಸೋಮವಾರ, ಜುಲೈ 26, 2021
26 °C

ನಿತ್ಯ ಪ್ರತಿಜ್ಞೆಯೊಂದಿಗೆ ರೋಗಿಗಳ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಜಿಲ್ಲೆಯಲ್ಲಿ ಮೊದಲ ಕೋವಿಡ್‌-19 ಸೋಂಕು ಪತ್ತೆಯಾದಾಗ ನನ್ನಲ್ಲಿ ಸ್ವಲ್ಪ ಆತಂಕ ಮೂಡಿತ್ತು. ಕಳೆದ ಹಲವು ವರ್ಷಗಳಿಂದ ವೈದ್ಯ ವೃತ್ತಿಯಲ್ಲಿರುವ ನಾನು ಈ ಮೊದಲು ಇಂತಹ ಪ್ರಕರಣವನ್ನು ಕಂಡಿರಲಿಲ್ಲ ಮತ್ತು ಕೇಳಿರಲಿಲ್ಲ. 

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೋಗುವ ಮುನ್ನ ಪಿಪಿಇ ಕಿಟ್‌ ಧರಿಸುತ್ತಿದ್ದೆ. ಅದನ್ನು ಧರಿಸಿದ ಮೇಲೆ ಶೌಚಾಲಯಕ್ಕೆ ಹೋಗಲಾಗುತ್ತಿರಲಿಲ್ಲ. ಅಲ್ಲದೆ ಏನನ್ನು ತಿನ್ನಲೂ ಆಗುತ್ತಿರಲಿಲ್ಲ. ಒಮ್ಮೆ ಅದನ್ನು ಧರಿಸಿ ಕೆಲಸಕ್ಕೆ ಹಾಜರಾದರೇ ಮುಗಿಯಿತು. ಕೆಲಸ ಮುಗಿಯುವವ ತನಕವೂ ಅದನ್ನು ತೆಗೆಯುತ್ತಿರಲಿಲ್ಲ. ಸತತ 6 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ್ದೇನೆ. ಇದು ಆರಂಭದಲ್ಲಿ ತುಸು ಕಷ್ಟವೆನಿಸಿದರೂ ಈಗ ಸಮಸ್ಯೆ ಏನಿಲ್ಲ.

ಸಾಮಾಜಿಕ ಜೀವನದಲ್ಲಿರುವ ನನ್ನಿಂದ ನನ್ನ ಮನೆಯವರಿಗೆ ತೊಂದರೆ ಆಗರಬಾರದು. ಈ ಕಾರಣದಲ್ಲಿ ಪ್ರತಿದಿನ ಮನೆ ಬಿಡುವಾಗಲೂ 'ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಮತ್ತು ಅದರ ಜೊತೆಗೆ ನನ್ನ ವೈಯಕ್ತಿಕ ಸುರಕ್ಷತೆಯನ್ನೂ ನೋಡಿಕೊಳ್ಳಬೇಕು' ಎಂಬ ಪ್ರತಿಜ್ಞೆಯನ್ನು ನನ್ನ ಮನಸ್ಸಿನಲ್ಲಿ ಅಂದುಕೊಂಡೇ ಹೊರಬೀಳುತ್ತೇನೆ.

ಆಸ್ಪತ್ರೆಯಲ್ಲಿದ್ದಾಗ ಸ್ಯಾನಿಟೈಸರ್‌, ಮಾಸ್ಕ್‌ ಮತ್ತು ಸೋಷಿಯಲ್‌ ಡಿಸ್ಟನ್ಸಿಂಗ್‌ (ಎಸ್‌ಎಂಎಸ್‌) ಈ ಮೂರು ಕ್ರಮಗಳನ್ನು ತಪ್ಪದೇ ಪಾಲಿಸುತ್ತೇನೆ.

-ಡಾ.ಎಸ್‌.ಬಿ.ದಾನರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು