ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಇನ್ನು ಜಿಲ್ಲಾ ಆಸ್ಪತ್ರೆ

ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ
Last Updated 9 ಏಪ್ರಿಲ್ 2020, 9:01 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಹರಡುವ ಭೀತಿ ಹಿನ್ನಲೆಯಲ್ಲಿ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದು, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯೆಂದು ಘೋಷಿಸಿದ್ದರಿಂದರೋಗಿಗಳ ಚಿಕಿತ್ಸೆಗೆಗವಿಸಿದ್ಧೇಶ್ವರ ಆರ್ಯುವೇದ ಕಾಲೇಜಿನ ಆಸ್ಪತ್ರೆಯನ್ನು ಪರಿವರ್ತಿತ ಜಿಲ್ಲಾ ಆಸ್ಪತ್ರೆಎಂದುಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿನ ಒಳರೋಗಿಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ. ಆದ್ದರಿಂದ ಜಿಲ್ಲೆಯ ವಿವಿಧ ತಾಲ್ಲೂಕಿಗಳಿಂದ ಚಿಕಿತ್ಸೆಗಾಗಿ ಬರುವ ಸಾರ್ವಜನಿಕರು ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಹಾಗೂ ತಾಲ್ಲೂಕು ಕೇಂದ್ರದ ವೈದ್ಯಾಧಿಕಾರಿಗಳ ಹತ್ತಿರ ಚಿಕಿತ್ಸೆ ಪಡೆಯಬೇಕು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳು ಶಿಫಾರಸು ಮಾಡಿದ ಪ್ರಕರಣ ಮತ್ತು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಬರುವಓಪಿಡಿ ರೋಗಿಗಳಿಗೆ ಚಿಕಿತ್ಸೆ ನೀಡಲುಈ ಆಸ್ಪತ್ರೆ ಗುರುತಿಸಲಾಗಿದೆ.

ಈ ಕುರಿತು ತಪಾಸಣೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳು, ನೋಡಲ್ ವೈದ್ಯಾಧಿಕಾರಿಯನ್ನು ಮತ್ತು ಸರ್ಕಾರಿ ವೈದ್ಯರನ್ನು ಹಾಗೂ ಸರತಿ ಪ್ರಕಾರ ಪ್ರಾಥಮಿಕ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಆಸ್ಪತ್ರೆಗೆ ವಿರುಪಾಕ್ಷಪ್ಪ ಎಸ್.ಮಾದಿನೂರು ಮೊ-9449843261 ಹಾಗೂ ಸುನೀಲ್ ಕುಮಾರ್ ದೇಸಾಯಿ ಮೊ- 9448777225 ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿ ನಿಯೋಜಿತ ವೈದ್ಯಾಧಿಕಾರಿಗಳ ಶಿಫಾರಸಿನನ್ವಯ ನಗರದಲ್ಲಿ ಗುರುತಿಸಲಾದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಗುರುತಿಸಲಾದ ಖಾಸಗಿ ಆಸ್ಪತ್ರೆಯವರಿಗೆ ಸರ್ಕಾರಿ ವೈದ್ಯರನ್ನು ಮತ್ತು ಔಷಧಿ ಸಾಮಗ್ರಿಗಳನ್ನು ಸರಬರಾಜು ಮಾಡಿದಲ್ಲಿ ಆ ಮೊತ್ತವನ್ನು ಖಾಸಗಿ ಆಸ್ಪತ್ರೆಯವರು ಕ್ಲೈಮ್‌ ಮಾಡಲಾದ ಮೊತ್ತದಲ್ಲಿ ಮುರಿದುಕೊಳ್ಳಲಾಗುವುದು ಎಂದು
ತಿಳಿಸಿದ್ದಾರೆ.

ಆಸ್ಪತ್ರೆಯವರು ಸರ್ಕಾರ ನಿಗದಿಪಡಿಸಿದ ಸಿ.ಜಿ.ಎಸ್ ದರದಂತೆ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಮತ್ತು ಈ ಕುರಿತು ಮೇಲ್ಕಾಣಿಸಿದ ಯೋಜನೆಯಡಿಯಲ್ಲಿ ಬಿಲ್ ತಯಾರಿಸಿಕೊಂಡು ಸರ್ಕಾರದಿಂದ ಕ್ಲೈಮ್‌ ಪಡೆದುಕೊಳ್ಳಬಹುದು. ಈ ಕ್ಲೈಮ್‌ ಕುರಿತು ಮಾಹಿತಿ ಪಡೆಯಲು ಎಬಿ-ಎಆರ್‌ಕೆ ಜಿಲ್ಲಾ ಟ್ರಸ್ಟ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಆದ್ದರಿಂದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಮತ್ತು ರೋಗಿಗಳೊಂದಿಗೆಬರುವ ಸಂಬಂಧಿಕರಿಂದ ಚಿಕಿತ್ಸೆಗೆಂದು ಯಾವುದೇ ಹಣ ಪಡೆಯುವಂತಿಲ್ಲ. ಈ ಕುರಿತು ಸಾರ್ವಜನಿಕರು ದೂರು ನೀಡಬಹುದಾಗಿದ್ದು, ಸಂಬಂಧಪಟ್ಟ ಆಸ್ಪತ್ರೆಗೆ/ಸಂಸ್ಥೆಯವರು ಜವಾಬ್ದಾರಿಯಿಂದ ಲಾಕ್‌ಡೌನ್ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದುಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT