ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಪತ್ರಿಕಾ ವಿತರಕರಿಗೆ ಆಹಾರ ಧಾನ್ಯದ ಕಿಟ್ ವಿತರಣೆ

Last Updated 4 ಜೂನ್ 2021, 11:05 IST
ಅಕ್ಷರ ಗಾತ್ರ

ಕುಷ್ಟಗಿ: ಲಾಕ್‌ಡೌನ್‌ ಸಂದರ್ಭದಲ್ಲಿ ಪರ್ಯಾಯ ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಪಟ್ಟಣದ ವಿವಿಧ ಪತ್ರಿಕಾ ವಿತರಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲ್ಲೂಕು ಘಟಕದ ವತಿಯಿಂದ ದಿನಸಿ ಸೇರಿ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ವಿರೇಶ ಕರಡಿ, ದೊಡ್ಡಬಸವ ಸುಂಕದ,‘ಬೆಳಗಿನ ಅವಧಿಯಲ್ಲಿ ಮನೆ ಮನೆಗೆ ಪತ್ರಿಕೆ ವಿತರಿಸುವ ಉಪ ಉದ್ಯೋಗದಲ್ಲಿ ತೊಡಗಿರುವ ಅನೇಕ ಜನರು, ಯುವಕರು ಮೂಲ ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಪರ್ಯಾಯ ಕೆಲಸವಿಲ್ಲದೆ ದೈನಂದಿನ ಬದುಕಿನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಪ್ರತಿಯೊಬ್ಬರೂ ಇಂಥ ಜನರ ಸಮಸ್ಯೆಗೆ ಸಾಧ್ಯವಾದಷ್ಟು ಸ್ಪಂದಿಸುವ ಅಗತ್ಯವಿದ್ದು, ಕಿಟ್ ನೀಡಲಾಗುತ್ತಿದೆ’ ಎಂದರು.

ವಿರೇಶ ತೊಂಡಿಹಾಳ, ಆದೇಶ ಕಂಚಿ, ಚಂದ್ರು ಪಾಟೀಲ, ಮಂಜುನಾಥ ಕಳಾರಪುರಮಠ, ರವಿ ಕಟ್ಟಿಮನಿ, ಶರಣು ಕುಡತನಿ, ಭರತ ತುರಾಕಾಣಿ, ಅರುಣ ಕುಲಕರ್ಣಿ ಹಾಗೂ ಹನಮಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT