ಮಂಗಳವಾರ, ಆಗಸ್ಟ್ 4, 2020
22 °C
ಅಪ್ಪಂದಿರ ದಿನದಂದೆ ಪತ್ತೆಯಾದ ಪ್ರಕರಣ

ಅಪ್ಪನ ಕಾಮಕ್ಕೆ ತುತ್ತಾಗಿ ಮಗು ಹಡೆದ ಬಾಲಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಂದೆಯಿಂದ ಸತತ ಒಂದು ವರ್ಷ ಕಾಲ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯೊಬ್ಬಳು, ಆತನ ಕ್ರೌರ್ಯದಿಂದ ಗರ್ಭಿಣಿಯಾಗಿ, ಮಗು ಹೆತ್ತ ಪ್ರಸಂಗ ಕೊಪ್ಪಳದಲ್ಲಿ ಭಾನುವಾರ ಪತ್ತೆಯಾಗಿದೆ.

ಕೊಪ್ಪಳ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಈ ಘಟನೆ, ವಿಶ್ವ ಅಪ್ಪಂದಿರ ದಿನದಂದೆ ಪತ್ತೆಯಾಗಿರುವುದು ವಿಪರ್ಯಾಸ.

ಪಾಪಿ ತಂದೆ 14 ವರ್ಷದ ಮಗಳನ್ನು ತನ್ನ ಜೊತೆಯಲ್ಲಿಯೇ ದನಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿದ್ದ. ಸತತ ಒಂದು ವರ್ಷದಿಂದ ಮಗಳಿಗೆ ಬೆದರಿಕೆ ಹಾಕಿ ಲೈಂಗಿಕತೆಗೆ ಬಳಸಿಕೊಳ್ಳುತ್ತಾ ಇದ್ದನು ಎಂದು ತಿಳಿದು ಬಂದಿದೆ.

ನಾಲ್ಕು ದಿನಗಳ ಹಿಂದೆ‌ ಆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಗಂಗಾವತಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಗರ್ಭಿಣಿಯಾಗಿ 8 ತಿಂಗಳಾಗಿರುವುದು ಗೊತ್ತಾಗಿದ್ದು, ಹೆರಿಗೆಯನ್ನೂ ಸಹ ಅಲ್ಲಿಯೇ ಮಾಡಿಸಲಾಗಿದೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಈ ಕುರಿತು ತಾಯಿ ಮಗಳನ್ನು ವಿಚಾರಿಸಿದಾಗ ತಂದೆಯೆ ಈ ನೀಚ ಕೃತ್ಯದ ಬಗ್ಗೆ ಗೊತ್ತಾಗಿದೆ. ಇದರಿಂದ ನೊಂದ ತಾಯಿ  ಪತಿ ಮೇಲೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತರ ಹೇಳಿಕೆ ಮತ್ತು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಅಧಿಕಾರಿಯ ದೂರು ಉಲ್ಲೇಖಿಸಿ ಪೊಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು