ಕಾರಟಗಿ: ತಾಲ್ಲೂಕಿನ ನಾಗನಕಲ್, ಬೇವಿನಾಳ ಗ್ರಾಮಸ್ಥರು ಕೊಪ್ಪಳ ಗವಿಸಿದ್ದೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಕೊಪ್ಪಳ ಗವಿಮಠದ ಜಾತ್ರೆಯ ದಾಸೋಹಕ್ಕೆ ಭಕ್ತರಿಂದ ಸಂಗ್ರಹಿಸಿದ ರೊಟ್ಟಿ ಇತರ ಆಹಾರ ಪದಾರ್ಥಗಳನ್ನು ಶನಿವಾರ ಟ್ರ್ಯಾಕ್ಟರ್ನಲ್ಲಿ ಲೋಡ ಮಾಡಿ, ಭಜನೆಯೊಂದಿಗೆ ಮೆರವಣಿಗೆ ಮಾಡುತ್ತ ಕಳುಹಿಸಿದರು. 15 ಸಾವಿರ ರೊಟ್ಟಿ, 1 ಬಾಕ್ಸ್ ಬೆಲ್ಲ, 8 ಚೀಲ ಅಕ್ಕಿ ಹಾಗೂ 200 ತೆಂಗಿನಕಾಯಿಗಳನ್ನು ದಾಸೋಹಕ್ಕಾಗಿ ಕಳುಹಿಸಿದರು.

ಸತತ 7ನೇ ವರ್ಷದಿಂದ ನಮ್ಮ ಉಭಯ ಗ್ರಾಮಗಳ ಭಕ್ತರಿಂದ ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ಕಳುಹಿಸಿ, ನಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ ಎಂದು ರೇವಣಸಿದ್ದಯ್ಯಸ್ವಾಮಿ ಸಾಲಿಮಠ, ರಮೇಶ ರಾಠೋಡ, ವೀರಭದ್ರಗೌಡ, ಪಂಪಾಪತಿ ನಾಯಕ ತಿಳಿಸಿದರು.

ಉಭಯ ಗ್ರಾಮದ ವಿವಿಧ ಜಾತಿಗಳಿಗೆ ಸೇರಿದ ಭೀಮನಗೌಡ, ವೀರೇಶ ಭಜಂತ್ರಿ, ಭೋಗಪ್ಪ ನವಲಿ, ಹುಸೇನಪ್ಪ ಹರಿಜನ, ಹುಲುಗೇಶ ಗೇನಿಕೊಪ್ಪ, ವಿರುಪಣ್ಣ ಆದಾಪುರ, ಶರಣಪ್ಪ ಹಡಪದ, ಅಜಯ ಹೋಟೇಲ್, ಮಹಾಂಕಾಳೆಪ್ಪ ಹರಿಜನ, ಮುತ್ತಪ್ಪ ತಳವಾರ, ಆಂಜನೇಯ ಗುಮಗೇರಿ, ನರಸಪ್ಪ ಗಂಗಾಮತ ಸಹಿತ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.