ಕನಕಗಿರಿ: ಪಟ್ಟಣದ ಗಂಗಾವತಿ-ಲಿಂಗಸೂರು ಹಾಗೂ ಕನಕಗಿರಿ-ಕಾರಟಗಿ ಮುಖ್ಯರಸ್ತೆಯಲ್ಲಿ ಗೂಡಂಗಡಿ ಇಟ್ಟುಕೊಂಡು ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಕನಕಾಚಲ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಯಮನೂರಪ್ಪ ನಾಯಕ, ಪ್ರಮುಖರಾದ ದುರಗೇಶ ಭೋವಿ, ಖಾಜಾಸಾಬ ಮಂಗಳೂರು, ರಾಮಣ್ಣ ನಾಯಕ, ಶರಣಪ್ಪ ಕಲಕೇರಿ, ಮಹ್ಮದರಫಿ ತಿಲಬುಕನಿ ಮಾತನಾಡಿ, ‘ಕಳೆದ 25 ವರ್ಷಗಳಿಂದಲೂ ಶೆಡ್ ಹಾಕಿಕೊಂಡು ನೂರಾರು ಬಡವರು, ವಿವಿಧ ರೀತಿಯ ವ್ಯಾಪಾರ ವಹಿವಾಟು ಮಾಡಿ, ಜೀವನ ಸಾಗಿಸುತ್ತಿದ್ದಾರೆ. ಇದೇ ವ್ಯಾಪಾರದಿಂದ ಬರುವ ಹಣದಿಂದ ಕುಟುಂಬದ ಸದಸ್ಯರ ಜೀವನ ನಿರ್ವಹಣೆ ನಡೆಯುತ್ತಿದೆ. ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗುತ್ತಿದೆ. ಈಗ ಏಕಾಏಕಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಶೆಡ್ ತೆರವಿಗೆ ಆದೇಶ ನೀಡಿರುವುದು ಕುಟುಂಬ ವರ್ಗದಲ್ಲಿ ಆತಂಕ ಮೂಡಿಸಿದೆ’ ಎಂದು ಅಳಲು ತೋಡಿಕೊಂಡರು.

ಬೀದಿ ವ್ಯಾಪಾರಿಗಳು ಕುಟುಂಬದ ಜೀವನದ ನಿರ್ವಹಣೆಗಾಗಿ ಎಗ್ ರೈಸ್, ಹಣ್ಣು, ತರಕಾರಿ ಮಾರಾಟ ಮಾಡುವುದು, ಕಟಿಂಗ್ ಶಾಪ್, ಹೋಟೆಲ್, ಮೊಬೈಲ್ ದುರಸ್ತಿ, ಟೀ ಸ್ಟಾಲ್, ಇತರೆ
ವ್ಯಾಪಾರಗಳನ್ನು ನೆಚ್ಚಿಕೊಂಡಿದ್ದಾರೆ. ಇವುಗಳನ್ನು ಬಿಟ್ಟು ಬೇರೆ ವ್ಯಾಪಾರ ಗೊತ್ತಿರುವುದಿಲ್ಲ. ಈ ವ್ಯಾಪಾರ ಬಿಟ್ಟರೆ ಕುಟುಂಬದವರು ಬೀದಿಪಾಲಾಗುತ್ತಾರೆ’ ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಕ್ಷಣೆ ನೀಡಿದೆ. ಈ ನಿಟ್ಟಿನಲ್ಲಿ
ಪ.ಪಂ ಮೂಲಕ ವ್ಯಾಪಾರಿಗಳಿಗೆ ಪರವಾನಗಿ ನೀಡಿದ್ದಲ್ಲದೆ ಸಾಲಸೌಲಭ್ಯ ನೀಡಿದ್ದು, ಶೆಡ್ ತೆರವುಗೊಳಿಸಿದರೆ ತುಂಬಾ ತೊಂದರೆಯಾಗುತ್ತದೆ’ ಎಂದು ತಿಳಿಸಿದರು.

ಈ ಪ್ರದೇಶವು ಬಡವರಿಗೆ ಅನುಕೂಲವಾಗಿದೆ. ಈ ಜಾಗದಲ್ಲಿ ವ್ಯಾಪಾರ ಮಾಡಲು ನಮಗೆ ಅನುಕೂಲ ಮಾಡಿಕೊಡಬೇಕು. ಆದೇಶವನ್ನು ಹಿಂಪಡೆಯಬೇಕು ಎಂದು ಎಂದು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ‘ಈಚೆಗೆ ನಡೆದ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಲಿಂಗಸೂರು, ಕಾರಟಗಿ ರಸ್ತೆಯಲ್ಲಿರುವ ಶೆಡ್ಗಳನ್ನು ಸ್ವಯಂ ಪ್ರೇರಿತವಾಗಿ ತೆರವು ಗೊಳಿಸಲು ತೀರ್ಮಾನಿಸಲಾಗಿದೆ. ಜ.10ರೊಳಗೆ ಕಾಲಾವಕಾಶ ನೀಡಲಾಗಿದ್ದು, ನಂತರ ನಿಯಮ ಅನುಸಾರವಾಗಿ ತೆರವುಗೊಳಿಸಲಾಗುವುದು’ ಎಂದು ಪ್ರತಿಕ್ರಿಯೆ ನೀಡಿದರು.

ಬೀದಿ ಬದಿ ವ್ಯಾಪಾರಿಗಳಾದ ರಾಜಾಸಾಬ ಅಯೋಧ್ಯ, ಬಸವರಾಜ ಭಾವಿಕಟ್ಟಿ, ಗಂಗಾಧರ ಚೆನ್ನಂಗಿ, ಹಸೇನಸಾಬ, ರಾಮಣ್ಣ ಕುರುಬರು, ಷರೀಫ್ ಬ್ಯಾಲ್ಯಾಳ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.