ಕೊಪ್ಪಳ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರವನ್ನು ಸ್ಥಗಿತಗೊಳಿಸುವ ನಿರ್ಧಾರ ರದ್ದು ಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ಸರ್ಕಾರಿ ಜಿಲ್ಲಾಸ್ಪತ್ರೆಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕೈಗೆ ಕಪ್ಪು ಬಟ್ಟೆ ಧರಿಸಿ ತಮ್ಮ ವಿರೋಧ ವ್ಯಕ್ತಪಡಿಸಿದರು.

ಜನರಿಗೆ ಅನುಕೂಲ ಕಲ್ಪಿಸಲುಕಡಿಮೆ ದರದಲ್ಲಿ ಔಷಧ ಮಾರಾಟಕ್ಕಾಗಿ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಇದರಿಂದ ಹೆಚ್ಚು ಬೆಲೆಗೆ ಸಿಗುತ್ತಿದ್ದ ಔಷಧಗಳು ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತಿದ್ದವು.

ಹಿಂದಿನ ಬಿಜೆಪಿ ಸರ್ಕಾರ ಹಲವು ವರ್ಷಗಳ ಹಿಂದೆ ಎಲ್ಲ ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ಆರಂಭಿಸಿತು. ರಾಜ್ಯದ ಕಾಂಗ್ರೆಸ್ ಸರ್ಕಾರವು ದುರುದ್ದೇಶದಿಂದ ಜನೌಷಧ ಕೇಂದ್ರ ಸ್ಥಗಿತಗೊಳಿಸಲು ಮುಂದಾಗಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು, ಬಳ್ಳಾರಿ ವಿಭಾಗದ ಸಹಪ್ರಭಾರಿ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸರೂರು, ವೈದ್ಯರಾದ ಕೆ.ಜಿ.ಕುಲಕರ್ಣಿ, ಮಹೇಶ ಗೋವನಕೊಪ್ಪ, ಮುಖಂಡರಾದ ಚಂದ್ರಶೇಖರ ಕವಲೂರ, ಗಣೇಶ್ ಹೊರತಟ್ನಾಳ, ಗ್ರಾಮೀಣ ಮಂಡಲದ ಅಧ್ಯಕ್ಷ ಪ್ರದೀಪ್ ಪಲ್ಲೇದ್, ನಗರ ಮಂಡಲದ ಅಧ್ಯಕ್ಷ ರಮೇಶ ಕವಲೂರ, ನೀಲಕಂಠಯ್ಯ ಹಿರೇಮಠ, ದೇವರಾಜ್ ಹಾಲಸಮುದ್ರ, ಚನ್ನಬಸು ಗಾಳಿ, ಮಲ್ಲಿಕಾರ್ಜುನ ಕಟ್ಟಿ, ಉಮೇಶ ಕುರುಡೇಕರ, ನೀಲಕಂಠಪ್ಪ ಮೈಲಿ, ಗಂಗಪ್ಪ ಗದಿಗೆ ಮನೆ, ಮಂಜುನಾಥ ನಗರಿ, ನಗರಸಭೆ ಸದಸ್ಯೆ ಸುನಿತಾ ಗಾಳಿ, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಜಯಶ್ರೀ ಗೊಂಡಬಾಳ, ಶೋಭಾ ನಗರಿ, ಕೀರ್ತಿ ಪಾಟೀಲ್, ಗೀತಾ ಮುತ್ತಾಳ, ಮಹಾಲಕ್ಷ್ಮಿ ಕಂದಾರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.