ಯಲಬುರ್ಗಾ: ‘ಸಮಾಜದಲ್ಲಿ ಎಲ್ಲ ವರ್ಗದ ಜನರಿಗೂ ಒಳ್ಳೆಯದನ್ನೇ ಬಯಸಬೇಕು. ಇನ್ನೊಬ್ಬರಲ್ಲಿ ಒಳ್ಳೆಯದನ್ನು ಕಂಡಾಗ ಮಾತ್ರ ನಾವು ಒಳ್ಳೆಯವರು ಆಗಲು ಸಾಧ್ಯ. ಮನುಷ್ಯರನ್ನೇ ದ್ವೇಷಿಸುವ ಮನುಷ್ಯ ರಾಕ್ಷಸನಿದ್ದಂತೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಲ್ಲಿ ಶನಿವಾರ ನಡೆದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ‘ದೇವರ ಬಳಿ ಹೋದಾಗ ಮೊದಲು ಬೇರೆಯವರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರೆ ನಮ್ಮ ಕುಟುಂಬಕ್ಕೂ ಒಳ್ಳೆಯದಾಗುತ್ತದೆ. ಶಿವರಾತ್ರಿ ದಿನದಂದು ಅನೇಕರು ಉಪವಾಸ ಮಾಡುತ್ತಾರೆ. ಕೆಲವರು ಉಪವಾಸ ಮಾಡುವುದಿಲ್ಲ. ಇವರಿಬ್ಬರಲ್ಲಿಯೂ ಭಕ್ತಿ ಇರುತ್ತದೆ. ಅದು ಪರಿಶುದ್ಧವಾಗಿರಬೇಕು’ ಎಂದರು.

‘ರಾಜಕಾರಣಿಗಳ ನಡುವೆಯೇ ಜಗಳ ಹಚ್ಚಿ ತಮಾಷೆ ನೋಡುವವರು ಅನೇಕರು ಇರುತ್ತಾರೆ. ಇದು ಇಂದಿನದ್ದೇನಲ್ಲ; ಹಿಂದೆ ನಮ್ಮವರೇ ಸಂಚು ಮಾಡಿ ಸಂಗೊಳ್ಳಿ ರಾಯಣ್ಣರನ್ನು ಬ್ರಿಟಿಷರ ಕೈಗೆ ಸಿಗುವಂತೆ ಮಾಡಿದರು. ಅದೇ ರೀತಿ ಎಲ್ಲ ಕಾಲದಲ್ಲಿಯೂ ಇಂಥ ಜನ ಇದ್ದೇ ಇರುತ್ತಾರೆ. ಕಾನೂನು ರಕ್ಷಣೆ ಮಾಡಬೇಕಾದ ಸಚಿವರೇ ನನ್ನನ್ನು ಮುಗಿಸುವ ಬಗ್ಗೆ ಮಾತನಾಡುತ್ತಾರೆ. ಅಧಿಕಾರ ಕೊಡುವವರು ಜನ; ಅವರ ಆಶೀರ್ವಾದ ಇರುವ ತನಕ ನನ್ನನ್ನು ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದರು.

'ಅಧಿಕಾರದಲ್ಲಿ ಇರಲಿ ಬಿಡಲಿ. ಸತ್ಯವನ್ನೇ ಹೇಳುವೆ. ಜಾತಿಗಿಂತ ಮುನುಷ್ಯರಾಗಿ ಇರಬೇಕು. ಯಾರು ನಿಮ್ಮ ಪರ ಇರುತ್ತಾರೊ ನೀವು ಅವರ ಪರ ಇರಬೇಕು’ ಎಂದು ಮನವಿ ಮಾಡಿದರು.

ಆತಂಕಕಾರಿ: ‘ಪರಸ್ಪರ ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವುದೇ ಹಿಂದೂ ಹಾಗೂ ಶೈವ ಪರಂಪರೆಯಾಗಿದೆ. ಇಂತಹ ನೆಲದಲ್ಲಿ ಸದ್ಯ ಅಧಿಕಾರದಲ್ಲಿರುವ ಸರ್ಕಾರದ ಕೆಲ ಸಚಿವರ ಹೇಳಿಕೆಗಳು ಆತಂಕ ಸೃಷ್ಟಿಸುತ್ತಿವೆ’ ಎಂದು ತಿಂಥಣಿ ಬ್ರಿಡ್ಜ್ ಕನಕಗುರುಪೀಠದ ಸಿದ್ಧರಾಮಾನಪುರಿ ಸ್ವಾಮೀಜಿ ಹೇಳಿದರು.

‘ಹಾಲುಮತ ಸಮಾಜ ಅನ್ಯ ಸಮಾಜವನ್ನು ಟೀಕಿಸಿಲ್ಲ. ದ್ವೇಷಿಸಿಯೂ ಇಲ್ಲ. ಆದರೆ, ಹಾಲುಮತ ಸಮಾಜದ ಮುಖಂಡರ ವಿರುದ್ಧ ದ್ವೇಷದ ಧೋರಣೆಯು ಎಲ್ಲರೂ ಸಮಾನರು ಎನ್ನುವ ಹಿಂದೂ ಸಂಸ್ಕೃತಿ ಮತ್ತು ಪರಂಪರೆಗೆ ವಿರುದ್ಧದ ನಡೆಯಾಗಿದೆ. ಇದನ್ನು ರೂಢಿಸಿಕೊಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅನೇಕ ರಾಜಕೀಯ ಧುರೀಣರು ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳುವವರೆ ಹೆಚ್ಚಾಗಿದ್ದಾರೆ. ಸ್ಥಳೀಯವಾಗಿಯೂ ಅದೇ ಸ್ಥಿತಿಯಲ್ಲಿದೆ. ಸಮಾಜದ ಮುಖಂಡರ ಪ್ರಯೋಜನ ಪಡೆದು ಬೆಳೆದ ಮೇಲೆ ಅವರನ್ನು ನಿರ್ಲಕ್ಷಿಸದೇ ಅವರನ್ನು ಬೆಳೆಸುವ ಕೆಲಸ ಮಾಡಬೇಕು’ ಎಂದರು.

‘ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಲಾಮಂಟಪದ ಅಭಿವೃದ್ಧಿಗೆ ಎಲ್ಲ ಸಮಾಜಗಳ ಮುಖಂಡರ ಕೊಡುಗೆ ಇದೆ. ಇದನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಬಾರದು’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಶಾಸಕ ರಾಜಶೇಖರ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಕಾಂಗ್ರೆಸ್ ಮುಖಂಡ ಕೆರಿಬಸಪ್ಪ ನಿಡಗುಂದಿ, ವಕೀಲ ತಿಪ್ಪನಗೌಡ ಪಾಟೀಲ, ಮುಖಂಡರಾದ ಅಂದಾನಗೌಡ ಪೊಲೀಸ್ಪಾಟೀಲ, ಸಿ.ಎಚ್. ಪಾಟೀಲ, ಬಸಲಿಂಗಪ್ಪ ಭೂತೆ, ಶಿವಶಂಕರರಾವ್ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹಿರಿಯ ವಕೀಲ ಬಿ.ಎಂ. ಶಿರೂರ, ಮುಖಂಡ ಹನಮಂತಗೌಡ ಪಾಟೀಲ, ಯಂಕಣ್ಣ ಯರಾಶಿ, ಶಾರದಾ ಬಾಲಚಂದ್ರ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಗೊಲ್ಲರ, ಭಾಗೀರಥಿ ಜೋಗಿನ, ಜಯಶ್ರೀ ಕಂದಕೂರ, ರಾಯಣ್ಣ ಸಮಿತಿ ಅಧ್ಯಕ್ಷ ಯಲ್ಲಪ್ಪ ಹೊಸಮನಿ, ಖಜಾಂಚಿ ಹನುಮಂತಪ್ಪ ಹನುಮಾಪುರ, ಪ್ರಮುಖರಾದ ಗೆದ್ದಪ್ಪ ಚಿಲವಾಡಗಿ, ರೇವಣಪ್ಪ ಹಿರೇಕುರುಬ, ಶಿವು ರಾಜೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು..

‘ನಿಂದಕರು ಎಲ್ಲ ಕಡೆಯೂ ಇರುತ್ತಾರೆ’

ಯಲಬುರ್ಗಾ: ನಿಂದಕರು ಎಲ್ಲ ಕಡೆಯೂ ಇರುವಂತೆ ಇಲ್ಲಿಯೂ ಇದ್ದಾರೆ. ಧಾರ್ಮಿಕ ಕಾರ್ಯಕ್ರಮವಾದ ಕಾರಣ ಇಲ್ಲಿ ರಾಜಕಾರಣ ಮಾತನಾಡುವುದಿಲ್ಲ. ಸಾಕಷ್ಟು ಜನರನ್ನು ನೋಡಿದ್ದೇನೆ. ಸಿದ್ದರಾಮಯ್ಯ ಎಂದಿಗೂ ಜಾತಿರಾಜಕಾರಣ ಮಾಡಿದವರಲ್ಲಿ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

‘ಕೆಲವರು ನನ್ನ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಅವುಗಳಿಗೆ ಉತ್ತರ ನೀಡಲು ಹೋಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಹಾಲುಮತ ಸಮುದಾಯದವರು ಇದ್ದಾರೆ. ಎಲ್ಲರೂ ಒಂದೇ ಎಂದು ಸಾರಿದವರು ಕನಕದಾಸರು. ಅದರಂತೆ ನಾವೆಲ್ಲರೂ ಬದುಕಬೇಕಿದೆ’ ಎಂದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲರೂ ಕೈ ಜೋಡಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಕೆ. ರಾಘವೇಂದ್ರ ಹಿಟ್ನಾಳ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.