ಮಂಗಳವಾರ, ಜನವರಿ 26, 2021
16 °C

ಮಹಾಶಕ್ತಿದೇವಿ ಭಕ್ತಿಗೀತೆಗಳ ಸಿ.ಡಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಇಲ್ಲಿಯ ಸಿರಿಗನ್ನಡ ಸ್ವರ ಸಂಗೀತ ಪಾಠ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಬ್ಬರಗಿ ಮಹಾಶಕ್ತಿ ದೇವಿಯ ಭಕ್ತಿಗೀತೆಗಳ ಸಿ.ಡಿ ಬಿಡುಗಡೆ ಮಾಡಲಾಯಿತು.

ಸಿರಿಗನ್ನಡ ಸಂಗೀತ ಪಾಠ ಶಾಲೆಯ ಅಧ್ಯಕ್ಷ ಗ್ಯಾನಪ್ಪ ತಳವಾರ ಮಾತನಾಡಿ,‘ಎಲ್ಲರ ಸಹಕಾರ ಇದ್ದರೆ ಮುಂದೊಂದು ದಿನ ಕಿರುಚಿತ್ರ ನಿರ್ಮಿಸಬಹುದು’ ಎಂದರು.

ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಚಂದಪ್ಪ ಹಕ್ಕಿ, ಹೋಬಳಿ ಘಟಕದ ಅಧ್ಯಕ್ಷ ಲಂಕೇಶ ವಾಲಿಕಾರ, ಕಬ್ಬರಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಂತೇಶ್ ವಜ್ಜಲ ಮಾತನಾಡಿದರು.

ಪ್ರಮುಖರಾದ ಶಿವಪ್ಪ ಸಜ್ಜನ್, ಚಿಕ್ಕಬಳ್ಳಾಪುರ ಭಾರತ ಸೇವಾದಳ ಜಿಲ್ಲಾ ಸಂಘಟಕ ಪ್ರಕಾಶ ಕಾಟಾಪೂರ, ಪೂಜಾ ಮುಧೋಳ, ಅಕ್ಷಯಕುಮಾರ ಸಿನ್ನೂರ, ಹನಮವ್ವ ತಳವಾರ, ಶಿಲ್ಪಾ ಕೊಪ್ಪಳ, ಸೌಂದರ್ಯ ಕೊಪ್ಪಳ ಹಾಗೂ ವೈಷ್ಣವಿ ಸಿನ್ನೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.