ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕನಸು ನನಸಿಗೆ ಗ್ರಾಮಾಭಿವೃದ್ಧಿ ಯೋಜನೆ: ಮಾಧವ ನಾಯಕ ಹೇಳಿಕೆ

ಗಾಂಧಿ ಸ್ಮೃತಿ, ಜನಜಾಗೃತಿ ಸಮಾವೇಶ
Last Updated 6 ಅಕ್ಟೋಬರ್ 2021, 3:28 IST
ಅಕ್ಷರ ಗಾತ್ರ

ಗಂಗಾವತಿ: ಮಹಾತ್ಮ ಗಾಂಧಿ ಅವರು ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ವಲಯದ ಯೋಜನಾಧಿಕಾರಿ ಮಾಧವ ನಾಯಕ ಹೇಳಿದರು.

ನಗರದ ಚನ್ನ ಮಲ್ಲಿಕಾರ್ಜುನ ಮಠದ ಸಭಾ ಭವನದಲ್ಲಿ ಮಂಗಳವಾರ ನಡೆದ ಗಾಂಧಿಸ್ಮೃತಿ ಮತ್ತು ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ‌ ಮಾತನಾಡಿದರು.

ಗಾಂಧೀಜಿ ಅವರ ಅಹಿಂಸೆ, ಶಾಂತಿ, ತ್ಯಾಗ ಹೋರಾಟದ ಫಲವೇ ನಮಗೆ ದೊರೆತಿರುವ ಸ್ವಾತಂತ್ರ್ಯವಾಗಿದೆ. ಅವರು ಮಹಿಳೆಯರ ಸಬಲಿಕರಣ, ಗ್ರಾಮಗಳ ಅಭಿವೃದ್ಧಿ, ಸ್ವದೇಶಿ ವಸ್ತುಗಳ ಬಳಕೆ ಸೇರಿ ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದರು.

ಗಾಂಧೀಜಿ ಅವರ ಕನಸು ಈಡೇರಿಸಲೆಂದೇ ಡಾ.ಡಿ ವೀರೇಂದ್ರ ಹೆಗ್ಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭಿಸಿ, ರಾಜ್ಯದ 48ಲಕ್ಷ ಕುಟುಂಬಗಳಿಗೆ ಅಭಿವೃದ್ದಿ ಬೆಳಕು ನೀಡಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ, ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿವೆ. ಯುವಕರಲ್ಲಿನ ದುಶ್ಚಟಗಳನ್ನು ಮುಕ್ತಗೊಳಿಸಲು ಸಮಾನ ಮನಸ್ಕರ ಸಂಘಟನೆ ಜನ ಜಾಗೃತಿ ವೇದಿಕೆ ಸಕಲ ರೀತಿಯಲ್ಲಿ ಶ್ರಮಿಸುತ್ತಿದೆ.

ಈ ಸಂಘಟನೆ 1992ರಲ್ಲಿ ಸ್ಥಾಪಿತವಾಗಿದ್ದು, 31 ಜಿಲ್ಲಾ ವೇದಿಕೆಗಳು, 303 ಕೋ-ಆಪ್ಟ್ ಸದಸ್ಯರು, 458 ಪದಾಧಿಕಾರಿಗಳು ಹಾಗೂ 700ಕ್ಕೂ ಹೆಚ್ಚು ಸದಸ್ಯರ ಸಂಖ್ಯೆ ಒಳಗೊಂಡಿದೆ.

ಈಗಾಗಲೇ 1,475 ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಶಿಬಿರಗಳನ್ನು ನಡೆಸಿ, 1.25 ಲಕ್ಷ ವ್ಯಸನಿಗಳ ಮನಸ್ಸು ಪರಿವರ್ತನಾ ಬೋಧನೆ ಮತ್ತು ಚಿಕಿತ್ಸೆಯ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡಲಾಗಿದೆ ಎಂದರು.

ರಾಜ್ಯದಾದ್ಯಂತ ಗಾಂಧಿಸ್ಮೃತಿ ಕಾರ್ಯಕ್ರಮದಡಿ ಜನ ಜಾಗೃತಿ ಜಾಥಾ, ಪಾನಮುಕ್ತರ ಸಮಾವೇಶ, ಸ್ವಚ್ಛತಾ ಕಾರ್ಯಕ್ರಮ, ಮಹಿಳಾ ಸಮಾವೇಶಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತದೆ. ವ್ಯಸನ ಮುಕ್ತರನ್ನು ಗುರುತಿಸಿ, ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ ಗೌರವ ನೀಡಿ ಸನ್ಮಾನಿಸಲಾಗುತ್ತದೆ ಎಂದರು.

ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ನೀಲಕಂಠಪ್ಪ ನಾಗಶೇಟ್ಟಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನವೀರನಗೌಡ, ಶಿವಾನಂದ ಮೇಟಿ, ಮುದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT