ಮಂಗಳವಾರ, ನವೆಂಬರ್ 29, 2022
29 °C

ಜಿಲ್ಲಾ ಕೇಂದ್ರದ ರಸ್ತೆ; ಏನೀ ಅವ್ಯವಸ್ಥೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಉತ್ತಮ ರಸ್ತೆಗಳು ಅಭಿವೃದ್ಧಿಯ ಸಂಕೇತವೂ ಹೌದು. ಆದರೆ, ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಮುಖ್ಯ ರಸ್ತೆಗಳೇ ಹಾಳಾಗಿವೆ. ಮಳೆ ಬಂದಾಗಲೊಮ್ಮೆ ತಾತ್ಕಾಲಿಕ ದುರಸ್ತಿ ಕಾಣುವ ಡಾಂಬಾರು ರಸ್ತೆಗಳು ಮಳೆ ಬಂದ ಕ್ಷಣಾರ್ಧದಲ್ಲಿಯೇ ಮೊದಲಿನ ಸ್ಥಿತಿಗೆ ತಲುಪುತ್ತವೆ.

ಕೊಪ್ಪಳ ಜಿಲ್ಲಾ ಕೇಂದ್ರವಾಗಿ 25 ವರ್ಷಗಳಾದರೂ ಗುಣಮಟ್ಟದ ರಸ್ತೆಗಳು ನಿರ್ಮಾಣವಾಗಿಲ್ಲ. ’ಗುಣಮಟ್ಟದ ರಸ್ತೆಗಳು’ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಕರೆಯಿಸಿಕೊಂಡ ಮಾರ್ಗಗಳು ಮಳೆಗಾಲದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುತ್ತವೆ. ನಗರದ ಹಲವು ಕಡೆ ಮಳೆಗಾಲಕ್ಕೂ ಮೊದಲೇ ದೊಡ್ಡದಾಗಿ ಗುಂಡಿ ಬಿದ್ದಿದ್ದರೂ ಎಚ್ಚೆತ್ತುಕೊಳ್ಳದ ಸ್ಥಳೀಯ ಆಡಳಿತ ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಇಷ್ಟೆಲ್ಲ ಓದಿಯೂ ರಸ್ತೆಗಳಲ್ಲಿ ನಿಧಾನವಾಗಿ ಸಂಚರಿಸದೇ ಹೋದರೆ ಜೀವ ಹಾಗೂ ಜೀವನಕ್ಕೆ ಕಂಟಕವಾಗುವ ಅಪಾಯ ತಪ್ಪಿದ್ದಲ್ಲ.

–ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.