ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಶಾಸಕ

7

ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ: ಶಾಸಕ

Published:
Updated:
Deccan Herald

ಕುಕನೂರು: ತಾಲ್ಲೂಕಿನ ಯರೇಹಂಚಿನಾಳ, ಬಿನ್ನಾಳ, ಚಿಕೇನಕೊಪ್ಪ ಸೇರಿ ವಿವಿಧ ಗ್ರಾಮಗಳ ಜಮೀನುಗಳಿಗೆ ಶಾಸಕ ಹಾಲಪ್ಪ ಆಚಾರ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಆರಂಭದಲ್ಲಿ ಉತ್ತಮವಾಗಿ ಮಳೆ ಆಗಿದ್ದರಿಂದ ಸಾಲ ಮಾಡಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದೆವು. ಈಗ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಬಾಡುತ್ತಿವೆ. ಬೆಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಅಳಲು ತೋಡಿಕೊಂಡರು.

‘ರೈತರು ಸಂಕಷ್ಟದಲ್ಲಿದ್ದರೂ ಯಾವುದೇ ಅಧಿಕಾರಿಗಳು ಜಮೀನಿಗೆ ಬಂದು ಪರಿಶೀಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಸ್ಥಳದಲ್ಲಿಯೇ ಇದ್ದ ತಾಲ್ಲೂಕು ಕೃಷಿ ಅಧಿಕಾರಿ ಆರುಣ ರಷೀದ್‌, ಬೆಳೆ ಹಾನಿ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ, ಮುಖ್ಯಮಂತ್ರಿಗೆ ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕನ್ನು ಬರ  ಪೀಡಿತ  ಎಂದು ಘೋಷಣೆ ಮಾಡಬೇಕೆಂದು ಪತ್ರ ಬರೆದಿದ್ದೇನೆ. ರೈತರು ಗಂಭೀರ ಸ್ಥಿತಿಯಲ್ಲಿದ್ದು, ಅವರ ನೆರವಿಗೆ ಬರುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

 ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸರ್ಕಾರದಿಂದ ಸಿಗುವ ಪರಿಹಾರ ದೊರಕಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಶರಣಪ್ಪ ಗುಂಗಾಡಿ, ಮಂಜುನಾಥ ನಾಡಗೌಡ, ಶಿವಕುಮಾರ ನಾಗಲಾಪೂರ ಮಠ, ಬಸವರಾಜ ಬಿನ್ನಾಳ, ಕಪ್ಪತ್ತಪ್ಪ ಅಂಗಡಿ, ಪ್ರಕಾಶ ಬಿನ್ನಾಳ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !