ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹನೀಯರ ಆದರ್ಶ ಅಳವಡಿಸಿಕೊಳ್ಳಿ’

ಜಿಲ್ಲೆಯಲ್ಲಿ ಹಲವೆಡೆ ಡಾ.ಬಾಬು ಜಗಜೀವನರಾಂ 115ನೇ ಜಯಂತಿ ಸಂಭ್ರಮ, ಗಣ್ಯರು ಭಾಗಿ
Last Updated 6 ಏಪ್ರಿಲ್ 2022, 4:22 IST
ಅಕ್ಷರ ಗಾತ್ರ

ಕೊಪ್ಪಳ: ಇಂದಿನ ಯುವ ಪೀಳಿಗೆಯು ಡಾ.ಬಾಬು ಜಗಜೀವನರಾಂ ಅವರಂತಹ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.

ಮಂಗಳವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್‌ರವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಕಡ್ಲಬಾಳ ಪನ್ನಂಗಧರ ಮಾತನಾಡಿ, ಬಾಬು ಜಗಜೀವನರಾಂ ಅವರು ತಮ್ಮ ಇಡೀ ಜೀವನವನ್ನು ದಲಿತರ ಉದ್ಧಾರಕ್ಕಾಗಿ ಮುಡುಪಾಗಿಟ್ಟರು. ಇಂದಿನ ಯುವ ಪೀಳಿಗೆಯು ಇಂತ ಮಹನೀಯರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ, ಯುವಜನರು ಹಿಂದಿನ ನಾಯಕರುಗಳನ್ನು ದಾರಿದೀಪವಾಗಿ ಇಟ್ಟುಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಬದಲಾವಣೆ ತರಬಹುದು. ಶಿಕ್ಷಣದಿಂದ ದಲಿತರ ಹಾಗೂ ಹಿಂದುಳಿದ ವರ್ಗದ ಸಮುದಾಯಗಳ ಬೆಳವಣಿಗೆಯನ್ನು ನೋಡಬಹುದು ಎಂದರು.

ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಹಾಂತೇಶ ಎಸ್.ಪಾಟೀಲ್, ಜಿ.ಪಂ. ಸಿಇಒ ಬಿ.ಫೌಜಿಯಾ ತರನ್ನುಮ್,ಎಸ್‌ಪಿ ಅರುಣಾಂಗ್ಷು ಗಿರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ ಶಿಂತ್ರೆ, ಡಿ.ಎಚ್.ಒ ಡಾ.ಅಲಕಾನಂದ ಮಳಗಿ, ತಹಶೀಲ್ದಾರ್, ಇಒ ಸೇರಿದಂತೆ ಸಮಾಜದ ಮುಖಂಡರಾದ ಗಾಳೆಪ್ಪ ಪೂಜಾರ, ಗುಂಡಪ್ಪ, ದೇವಪ್ಪ ಕಟ್ಟಿಮನಿ, ಸಣ್ಣಬಸಪ್ಪ, ಯಲ್ಲಮ್ಮ ಗಿಣಿಗೇರಿ, ಯಲ್ಲಪ್ಪ ಬಳಗಾನೂರ, ಮಹಾಲಕ್ಷ್ಮಿ ಕಂದಾರಿ, ಸಿದ್ರಾಮ್ ಹೊಸಮನಿ, ಗವಿಸಿದ್ದಪ್ಪ ಬೆಲ್ಲದ್, ಸಿದ್ಧಪ್ಪ, ಹನುಮೇಶ ಇದ್ದರು.

ಸಾಧಕರಿಗೆ ಸನ್ಮಾನ:ನಗರದ ಸಾಹಿತ್ಯ ಭವನದಲ್ಲಿ ನಡೆದ ಡಾ. ಬಾಬು ಜಗಜೀವನ್‌ರಾಂ ಅವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಮಹೇಶ್ವರಿ, ಅಶ್ವ್ವಿನಿ, ಕನಕಪ್ಪ ಅವರನ್ನು ಸನ್ಮಾನಿಸಲಾಯಿತು.

ಡಾ. ಬಾಬು ಜಗಜೀವನರಾಂ ಅವರ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಅನಿತಾ, ಮಂಜುನಾಥ ದ್ವಿತೀಯ, ಪವಿತ್ರತೃತೀಯ ಮತ್ತು ಭಾಷಣ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಶಿವಶಂಕರ, ಹುಲಿಗೆಮ್ಮ ದ್ವಿತೀಯ, ರತ್ನಮ್ಮ ಮತ್ತು ಗಾಯತ್ರಿತೃತೀಯ ಇವರಿಗೆ ಬಹುಮಾನ ವಿತರಿಸಿ, ಸನ್ಮಾನಿಸಲಾಯಿತು.

‘ಸಾಮಾಜಿಕ ನ್ಯಾಯದ ಹರಿಕಾರ’

ಯಲಬುರ್ಗಾ: ಸಾಮಾಜಿಕ ನ್ಯಾಯ ಮತ್ತು ಹಸಿರುಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿಯಾಗಿವೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು.

ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತ ಕುಮಾರ ಭಾವಿಮನಿ, ಶೋಷಣೆಗೆ ಒಳ ಪಡುತ್ತಿದ್ದ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಸುಧಾರಣೆಗೆ ಶ್ರಮಿಸಿದ ಬಾಬುಜೀಯವರು ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ರೈತರ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ತೋರಿದ್ದರಿಂದ ಇವರಿಗೆ ಹಸಿರು ಕ್ರಾಂತಿ ಹರಿಕಾರ ಎಂದು ಬಣ್ಣಿಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪಿಎಸ್‍ಐ ಶಿವಕುಮಾರ ಮುಗ್ಗಳ್ಳಿ, ಸಮಾಜ ಕಲ್ಯಾಣಾಧಿಕಾರಿ ವಿ.ಕೆ.ಬಡಿಗೇರ ಮಾತನಾಡಿದರು.

ಬಿಸಿಎಂ ಅಧಿಕಾರಿ ಎಸ್.ಬಿ.ಭಜಂತ್ರಿ, ಪಪಂ ಸದಸ್ಯರಾದ ಬಸಮ್ಮ ಬಣಕಾರ, ಹನಮಂತಪ್ಪ ಭಜಂತ್ರಿ, ಕಳಕಪ್ಪ ತಳವಾರ, ಡಾ.ಶಿವನಗೌಡ ದಾನರೆಡ್ಡಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಗಾಂಜಿ, ಶಂಕರ ಭಾವಿಮನಿ, ಶಿವನಂದ ಬಣಕಾರ, ಮಲ್ಲಿಕಾರ್ಜುನ ಜಕ್ಕಲಿ, ಈರಪ್ಪ ಬಣಕಾರ,ಶರಣಮ್ಮ ಪೂಜಾರ, ಶಂಕರ ಭಾವಿಮನಿ, ವೆಂಕಣ್ಣ ಜೋಷಿ, ಶಿವಕುಮಾರ ಸರಗಣಾಚಾರ, ರಾಮಣ್ಣ, ಪ್ರಕಾಶ ಬಣಕಾರ ಇದ್ದರು.

ಪುಷ್ಪನಮನ

ಕನಕಗಿರಿ: ಇಲ್ಲಿನ ತಹಶೀಲ್ದಾರ್ ಕಚೇರಿ ಸೇರಿದಂತೆ ಪಟ್ಟಣದ ವಿವಿಧ ಸರ್ಕಾರಿ ಹಾಗೂ ಪಕ್ಷದ ಕಚೇರಿಗಳಲ್ಲಿ ಡಾ. ಬಾಬು ಜಗಜೀವನರಾಂ ಅವರ 115ನೇ ಜಯಂತಿ ಆಚರಿಸಲಾಯಿತು.

ಡಾ.ಬಾಬು ಜಗಜೀವನರಾಂ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಧನಂಜಯ ಮಾಲಗಿತ್ತಿ ಮಾತನಾಡಿದರು.

ಬಿಜೆಪಿ ಮಂಡಳ ಅಧ್ಯಕ್ಷ ಮಹಾಂತೇಶ ಸಜ್ಜನ್, ಪಿಐ ಪರಸಪ್ಪ ಭಜಂತ್ರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಹನುಮಂತಪ್ಪ ಬಸರಿಗಿಡದ, ರಾಜಸಾಬ ನಂದಾಪುರ, ಮಾಜಿ ಸದಸ್ಯ ಸುಭಾಸ ಕಂದಕೂರ, ಪ್ರಮುಖರಾದ ಸಣ್ಣ ಕನಕಪ್ಪ, ಅನ್ನು ಚಳ್ಳಮರದ, ಶಾಂತಪ್ಪ ಬಸರಿಗಿಡದ ಇದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಇಲ್ಲಿನ ದ್ಯಾಮವ್ವನಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ, ಮುಖ್ಯಶಿಕ್ಷಕಿ ನಾಗರತ್ನ, ಶಿಕ್ಷಕಿ ಅಕ್ಕಮಹಾದೇವಿ ಕಿತ್ತೂರು ಹಾಗೂ ವಿದ್ಯಾರ್ಥಿಗಳು ಇದ್ದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಯಂತಿಯಲ್ಲಿ
ಪ್ರಮುಖರಾದ ಚಂದ್ರೆಗೌಡ ಪಾಟೀಲ, ಮಂಜುನಾಥ ಯಾದವ, ರಫಿ ಬಿಳಿಕುದುರಿ, ವೀರೇಶ ಗಂಗಾಮತ, ರಮೇಶ ಬಡಿಗೇರ ಹಾಗೂ ಇತರರು ಇದ್ದರು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಸುರೇಶ ಗುಗ್ಗಳಶೆಟ್ರ, ಶೇಷಪ್ಪ ಪೂಜಾರ, ಹನುಮಂತಪ್ಪ ಬಸರಿಗಿಡದ, ಪ್ರಕಾಶ ಹಾದಿಮನಿ, ಕಂಠಿ ಮ್ಯಾಗಡೆ, ಹೊನ್ನುರುಸಾಬ ಕಳ್ಳಿಮನಿ, ದುರಗಪ್ಪ ಯಮನಪ್ಪ, ಅರುಣಕುಮಾರ ಭೂಸನೂರಮಠ ಇದ್ದರು.

‘ಚಿಂತನೆ ಪಾಲಿಸಿ’

ಕಾರಟಗಿ: ಡಾ. ಬಾಬು ಜಗಜೀವನ ರಾಂ ಅವರ ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ರವಿ ಎಸ್.‌ ಅಂಗಡಿ ಹೇಳಿದರು.

ಪಟ್ಟಣದ ನವಲಿ ರಸ್ತೆಯಲ್ಲಿಯ ಡಾ. ಬಾಬು ಜಗಜೀವನ ರಾಂ ವೃತ್ತದಲ್ಲಿ ತಾಲ್ಲೂಕಾಡಳಿತ ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ನಡೆದ ಡಾ. ಬಾಬು ಜಗಜೀವನ ರಾಂ ಅವರ 115ನೇ ಜಯಂತಿ ನಿಮಿತ್ತ ಅವರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಿಆರ್‌ಪಿ ತಿಮ್ಮಣ್ಣ ನಾಯಕ, ಇನ್‌ಸ್ಪೆಕ್ಟರ್‌ ವಿ. ಎಸ್. ಹಿರೇಮಠ, ರಾಘವೇಂದ್ರ, ಸುಮಂಗಲಾ, ತಿಮ್ಮಣ್ಣ ನಾಯಕ, ಗಂಗಪ್ಪ, ಭೀಮಣ್ಣ ಕರಡಿ, ಮಲ್ಲಿಕಾರ್ಜುನ, ಪ್ರಭುದೇವ ಪ್ರಮುಖರಾದ ಗಾಳೇಶ, ಜಮದಗ್ನಿ, ಹನುಮೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT