ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಶಾಲಾ ಆವರಣದಲ್ಲಿ ಚರಂಡಿ ನೀರು

ಬಳಕೆಗೆ ಬಾರದ ನಿರುಪಯುಕ್ತ ಶೌಚಾಲಯ
Last Updated 11 ಫೆಬ್ರುವರಿ 2022, 4:33 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ರಘುನಾಥನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಂಪೌಂಡ್‌, ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿ ಅಗತ್ಯ ಸೌಲಭ್ಯಗಳ ತೀವ್ರ ಕೊರತೆ ಎದ್ದು ಕಾಣುತ್ತಿದೆ.

ಶಾಲೆಯು ಹಲವಾರು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಮಕ್ಕಳ ಶಿಕ್ಷಣಕ್ಕೆ ಅಡಚಣೆ ಕಂಡುಬಂದಿದೆ. ಶಾಲೆಯಲ್ಲಿ ಒಟ್ಟು 53 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಾಲೆಯು ಶಿಗ್ಗಾವಿ – ಕಲ್ಮಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇದ್ದು ನಿತ್ಯವು ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ವಾಹನಗಳ ಶಬ್ದವು ಹಾಗೂ ರಸ್ತೆಯಲ್ಲಿನ ದೂಳು ಶಾಲಾ ಮಕ್ಕಳ ಅಭ್ಯಾಸಕ್ಕೆ ಅಡಚಣೆ ಉಂಟು ಮಾಡುತ್ತಿದೆ.

ಶಾಲೆಯ ಮೈದಾನವು ರಸ್ತೆಗಿಂತ ಕೆಳಮಟ್ಟದಲ್ಲಿ ಇರುವುದರಿಂದ ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿ ಇಲ್ಲದೆ ಇರುವುದರಿಂದ ಚರಂಡಿ ನೀರು ಶಾಲೆ ಮೈದಾನದಲ್ಲಿ ನಿಲ್ಲುತ್ತಿದೆ. ಇದರಿಂದ ಶಾಲಾ ಆವರಣದಲ್ಲಿ ಗಲೀಜು ವಾತಾವರಣ ನಿರ್ಮಾಣವಾಗಿದೆ. ಶೌಚಾಲಯ ಕೂಡ ಹಲವಾರು ವರ್ಷಗಳ ಹಿಂದೆ ನಿರ್ಮಿಸಿರುವುದರಿಂದ ಶಿಥಿಲಗೊಂಡು ನಿರೂಪಯುಕ್ತವಾಗಿದೆ. ಬಳಕೆಗೆ ಯೋಗ್ಯವಾಗಿಲ್ಲ.

‘ಪ್ರಜಾವಾಣಿ’ ಜೊತೆಗೆ ಗ್ರಾಮದ ಯುವಕರಾದ ಮಹಾಂತೇಶ ಹಾಗೂ ರಾಜು ಸಿಂದೋಗಿ ಮಾತನಾಡಿ, ‘ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯ ಬಿದ್ದು ನಿರೂಪಯುಕ್ತವಾಗಿದೆ. ಚರಂಡಿ ನೀರು ಶಾಲೆ ಮೈದಾನದೊಳಗೆ ಬಂದು ಗಲೀಜು ವಾತಾವರಣ ಉಂಟಾಗಿದೆ. ಆವರಣ ಗೋಡೆ ನಿರ್ಮಾಣ ಹಾಗೂ ಎತ್ತರಗೊಳಿಸಬೇಕು. ಗೇಟ್ ಅಳವಡಿಸಬೇಕು. ನೀರು ಪೂರೈಕೆ ಮಾಡಬೇಕು’ ಎಂದು ಹೇಳಿದ್ದಾರೆ.

ಸುಣ್ಣ–ಬಣ್ಣ ಹಚ್ಚಿದ ಕಲರವ ತಂಡ: ಕೆಲ ದಿನಗಳ ಹಿಂದೆ ಕೊಪ್ಪಳದ ಸಮಾನ ಮನಸ್ಕ ಶಿಕ್ಷಕರ ಕಲರವ ತಂಡ ತಮ್ಮ ಸ್ವಂತ ಹಣದಿಂದ ಶಾಲೆಗೆ ಸುಣ್ಣ ಬಣ್ಣ ಮಾಡಿ ಶಾಲೆಯ ರಂಗು ಹೆಚ್ಚಿಸಿದ್ದಾರೆ.

‘ಶಾಲೆಯ ಸಮಸ್ಯೆ ಬಗ್ಗೆ ಗಮನ ಹರಿಸಿದ್ದು ಶೀಘ್ರವೇ ನೂತನ ಶೌಚಾಲಯ ನಿರ್ಮಿಸಲಾಗುವದು. ಆವರಣದ ಗೋಡೆ ಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ 15 ನೆ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ ನಿರ್ಮಿಸಲಾಗುವದು. ಶೀಘ್ರದಲ್ಲಿ ನೀರು ಪೂರೈಕೆ ಒದಗಿಸಲಾಗುವುದು’ ಎಂದು ಪಿಡಿಓ ಮಂಜುನಾಥಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT