ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೀಕ್‌ಔಟ್‌’ ರಂಗಪ್ರಯೋಗ

Last Updated 30 ಮೇ 2022, 4:31 IST
ಅಕ್ಷರ ಗಾತ್ರ

ಹನುಮಸಾಗರ: ಇಲ್ಲಿನ ಆಶ್ರಯ ಬಡಾವಣೆಯಲ್ಲಿ ರಂಗ ಕಲಾವಿದೆ ಅಕ್ಷತಾ ಪಾಂಡವಪುರ ಅವರ ಕಥಾ ಸಂಕಲನ ‘ಲೀಕ್‌ ಔಟ್‌’ನ ರಂಗ ಪ್ರಯೋಗ ನಡೆಯಿತು.

ಅಕ್ಷತಾ ಅವರ ನಟನೆಯೇ ವಿಶಿಷ್ಟ. ಪ್ರೇಕ್ಷಕರನ್ನೇ ಪಾತ್ರಧಾರಿಗಳನ್ನಾಗಿಸಿ ರಂಗಸಜ್ಜಿಕೆಗೆ ತರುವ ಕೌಶಲ ಅವರಲ್ಲಿದೆ. ಲೀಕ್‍ಔಟ್ ರಂಗಪ್ರಯೋಗ ಆಧುನಿಕ ಜಗತ್ತಿನ ಸಮಸ್ಯೆಗಳ ಜತೆಗೆ ಅನುಸಂಧಾನ ಮಾಡುವ ಮೂಲಕ ಹೆಣ್ಣಿನ ಆಂತರ್ಯದ ತಲ್ಲಣಗಳನ್ನು ಹಿಡಿಯುವ ಪ್ರಯತ್ನ ಮಾಡಿದೆ.

ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾಗಿರುವ ಅಕ್ಷತಾ ರಂಗಭೂಮಿಯ ಜತೆಗೆ ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ‘ಪಲ್ಲಟ’ ಚಿತ್ರದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರಿಗೆ ‘ಪಿಂಕಿ ಎಲ್ಲಿ’ ಚಿತ್ರದಲ್ಲಿನ ಅಭಿನಯಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದೆ.

ಇವರು ಸರಳವಾದ ರಂಗ ಸಜ್ಜಿಕೆಯೊಂದಿಗೆ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುತ್ತ ಕಥೆಯೊಳಗೆ ಸೇರಿಸಿಕೊಂಡು ಪ್ರತಿಯೊಬ್ಬರ ಆಂತರ್ಯದ ಕಥೆಗಳಿಗೆ ಜಾಗ ನೀಡುತ್ತಾರೆ. ಎಲ್ಲರ ಸುಪ್ತ ಭಾವಗಳನ್ನು ಹೊರತರುವುದರ ಜತೆಗೆ ಅಳು, ಸಂಕಟ, ನೋವು ಹಾಗೂ ಹತಾಶೆ ವ್ಯಕ್ತಪಡಿಸಲು ಅವಕಾಶ ನೀಡುವರು. ‘ಎಲ್ಲರೊಳಗೂ ಕಥೆಗಳಿವೆ. ನಟರಿದ್ದಾರೆ’ ಎನ್ನುತ್ತಾರೆ ಅಕ್ಷತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT