ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಹುಲಿಹೈದರ, ಸೂಳೇಕಲ್‌ನಲ್ಲಿ ಈದ್ ಸಂಭ್ರಮ

Last Updated 3 ಮೇ 2022, 13:12 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹುಲಿಹೈದರ, ನವಲಿ, ಸೂಳೇಕಲ್ ಗ್ರಾಮಗಳಲ್ಲಿ ಮಂಗಳವಾರ ಈದ್‌ ಉಲ್‌ ಫಿತ್ರ್‌ ಆಚರಿಸಲಾಯಿತು.

ಕೊಪ್ಪಳ ರಸ್ತೆಯಲ್ಲಿರುವ ಮದೀನ್ ಈದ್ಗಾ ಮೈದಾನದಲ್ಲಿ ಮಂಗಳವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆಫೀಜ ಅಬ್ದುಲಸಾಬ ಕ್ವಾಟಿ ಅವರು ಕುತುಬಿ ಪಠಣ ಮಾಡಿಸಿದರು.

ಪ್ರಮುಖರಾದ ತಾಜುದ್ದೀನ ವಟಪರ್ವಿ, ಖಾದರಬಾಷ ಗುಡಿಹಿಂದಲ, ಹಸೇನಸಾಬ ನಡಲಮನಿ, ಬಾದಿನಸಾಬ ಕೋಳಿ, ಮೌಲಸಾಬ ಶಿರವಾರ, ಖಲೀಲ್ ಉಲ್ಲಾ ಹಾಗೂ ಯೂಸೂಫ್‌ ಇದ್ದರು.

ವಕೀಲ ದಸ್ತಗೀರಸಾಬ ಚಳ್ಳಮರದ, ಸಮುದಾಯ ಆರೋಗ್ಯ ಅಧಿಕಾರಿ ಸಮೀರ ತಾವರಗೇರಾ ಅವರನ್ನು ಸನ್ಮಾನಿಸಲಾಯಿತು.

ಸೂಳೇಕಲ್ ಗ್ರಾಮದ ಈದ್ಗಾ ಮೈದಾನದಲ್ಲಿ ಚಂದುಸಾಬ ಸೂಳೇಕಲ್ ಅವರು ಸಾಮೂಹಿಕ ಪ್ರಾರ್ಥನೆ ಮಾಡಿಸಿ ಕುತುಬಿ ಓದಿದರು.

ಮುಸ್ಲಿಂ ಸಮಾಜದ ಅಧ್ಯಕ್ಷ ಸಣ್ಣ ಕಾಶೀಂಸಾಬ, ಕಾರ್ಯದರ್ಶಿ ಇಮಾಮಸಾಬ, ಪ್ರಮುಖರಾದ ಮೈನುಸಾಬ, ಮುದಗಲಸಾಬ ಬಗಡಿಮನಿ, ರಾಜಾಸಾಬ ಕನಕಗಿರಿ, ಹುಸೇನಸಾಬ ಹೋಟೆಲ್‌, ಮೈನೂಸಾಬ ಪಟೇಲ್, ಮುರ್ತುಜಸಾಬ ವಾಲೇಕಾರ ಹಾಗೂ ಮೈಬೂಬಸಾಬ ಇದ್ದರು.

ಹುಲಿಹೈದರ: ಸಮೀಪದ ಹುಲಿಹೈದರ ಗ್ರಾಮದ ಈದ್ಗಾ ಮೈದಾನದಲ್ಲಿ ಈದ್–ಉಲ್‌–ಫಿತ್ರ್‌ ಆಚರಿಸಲಾಯಿತು.

ಮೌಲಾನ್ ಅಬ್ದುಲ್ ರಹಿಮಾನ್ ಅವರು ಸಾಮೂಹಿಕ ಪ್ರಾರ್ಥನೆ ಮಾಡಿಸಿದರು.

ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಿ.ಅಮೀನಸಾಬ, ಗ್ರಾಮ ಪಂಚಾಯಿತಿ ಸದಸ್ಯ ರಾಜಾಸಾಬ ಕಟ್ಟಿಮನಿ, ಪ್ರಮುಖರಾದ ಹುಸೇನಸಾಬ ಟೇಲರ್, ರಾಜಾಸಾಬ ಬನ್ನಿಗಿಡ, ಮುರ್ತುಜಾಸಾಬ ಪಠಣ, ಗೌಸುಸಾಬ ಸೈಯದ್, ಹುಸೇನಸಾಬ ಪೇಟಲ್, ಜೀಲನಸಾಬ ಕಾತರಕಿ, ಮಹ್ಮದಸಾಬ ಕಾತರಕಿ, ಶಾಮೀದಸಾಬ ಹಾಗೂ ಸೈಯದ ಸುಭಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT