‘ಗಲಾಟೆಯಾಗದಂತೆ ಚುನಾವಣೆ ನಡೆಸಿ’

ಕನಕಗಿರಿ: ತಾಲ್ಲೂಕಿನ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾ ವೀಕ್ಷಕ ಡಾ.ಡಿ.ಷಣ್ಮುಖ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿ,‘ಪಟ್ಟಣದ ನಂದಿ ಚಿತ್ರ ಮಂದಿರದಲ್ಲಿ ಡಿ. 19 ರಂದು ಪಿಆರ್‌ಒ ಹಾಗೂ ಎಪಿಆರ್‌ಒಗಳಿಗೆ ಚುನಾವಣಾ ತರಬೇತಿ ಆಯೋಜಿಸಲಾಗಿದೆ. ಕರ್ತವ್ಯಕ್ಕೆ ನಿಯೋಜನೆಗೊಂಡವರು ಕಡ್ಡಾಯವಾಗಿ ಹಾಜರಾಗಬೇಕು’ ಎಂದು ಅವರು ಕೋರಿದರು.
ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳ ಸಭೆ ನಡೆಸಿದ ಅವರು ಯಾವುದೇ ಗೊಂದಲ, ಗಲಾಟೆಗೆ ಅವಕಾಶ ನೀಡದೆ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಅವರು ಸೂಚಿಸಿದರು.
ಮತದಾರರ ಯಾದಿ, ಬೂತ್‌ಗಳ ಸಂಖ್ಯೆ ಹಾಗೂ ಇತರೆ ಮಾಹಿತಿ ಪಡೆದುಕೊಂಡರು.
ಸಮೀಪದ ನವಲಿ ಗ್ರಾಮಕ್ಕೆ ಭೇಟಿ ನೀಡಿದ ಡಾ.ಷಣ್ಮುಖ ಅವರು ಅಲ್ಲಿನ ಗ್ರಾಮ ಪಂಚಾಯಿತಿ ಚುನಾವಣಾ ಕಚೇರಿ ಹಾಗೂ ಬೂತ್‌ಗಳನ್ನು ಪರಿಶೀಲಿಸಿದರು.
ತಹಶೀಲ್ದಾರ್ ರವಿ ಅಂಗಡಿ, ನೋಡಲ್ ಅಧಿಕಾರಿ ಕೃಷ್ಣ ಉಕ್ಕುಂದ, ಎಂಸಿಸಿ ತಂಡದ ಲೀಡರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ, ಅಬಕಾರಿ ಸಿಪಿಐ ಸುಮಾ, ಪಿಎಸ್ಐ ಸುರೇಶ ಹಾಗೂ ಶಿರಸ್ತೇದಾರ ಧನಂಜಯ ಮಾಲಗಿತ್ತಿ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.